

ಚಾಮರಾಜನಗರ: ಜಿಲ್ಲಾ ಉದ್ಯೋಗ ಇಲಾಖೆ ಮತ್ತು ಬದನಗುಪ್ಪೆ, ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಕಿಚ್ ಪ್ರೈ.ಲಿ ಸಹಯೋಗದೊಂದಿಗೆ ಉದ್ಯೋಗ ನೇಮಕಾತಿಗಾಗಿ ನೇರ ಸಂದರ್ಶನವನ್ನು ಜು. 20ರಂದು ಬೆಳಗ್ಗೆ 10.30 ಕ್ಕೆ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಫಿಟ್ಟರ್ ಮತ್ತು ಟರ್ನರ್ ವಿಷಯದಲ್ಲಿ ಐಟಿಐ ಹಾಗೂ ಮೆಕ್ಯಾನಿಕಲ್ ನಲ್ಲಿ ಡಿಪ್ಲೊಮಾ, ಬಿಇ ವಿದ್ಯಾರ್ಹತೆ ಹೊಂದಿರಬೇಕು. 18 ರಿಂದ 40ರ ವಯೋಮಿತಿಯಲ್ಲಿಬೇಕು. ಆಸಕ್ತ ಅಭ್ಯರ್ಥಿಗಳು ಸ್ವ ವಿವರ ಮತ್ತು ಅಂಕಪಟ್ಟಿಗಳ ಮೂಲ ಹಾಗೂ ಜೆರಾಕ್ಸ್ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಉದ್ಯೋಗಾಧಿಕಾರಿ (ದೂ.ಸಂ 8884865299, 08226-224430) ಸಂಪರ್ಕಿಸುವಂತೆ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.