ವೇಷಭೂಷಣ ಸ್ಪರ್ಧೆಯಲ್ಲಿ 38ಕ್ಕೂ ಹೆಚ್ಚು ಮಕ್ಕಳು ಭಾಗಿ

ad950f0e-40f7-42a0-a094-776e03328799
Published on

ಚಾಮರಾಜನಗರ: ನಗರದ ಶ್ರೀಪರಿಮಳ ರಾಮ ವಿದ್ಯಾಮಂದಿರದಲ್ಲಿ ಶ್ರೀರಾಮಶೇಷ ಪಾಠಶಾಲಾ ಟ್ರಸ್ಟ್ ಹಾಗೂ ಸಂಜೀವನಿ ಟ್ರಸ್ಟ್ ಸಹಯೋಗದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಭಾನುವಾರ ಕೃಷ್ಣ-ರಾಧೆಯರ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿತ್ತು.

ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ 38ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಶೃತಿ ಅಜಿತ್, ಡಾ.ಅಕ್ಷತಾ ಜೈನ್, ಸುಪ್ರಿಯಾ ತೀರ್ಪುಗಾರರಾಗಿ ಭಾಗವಹಿಸಿದ್ದರು. ಸ್ವಯಂಸೇವಕ ನಾಗರಾಜು, ಪಾಠಶಾಲಾ ಆಚಾರ್ಯ ಪ್ರದೀಪ್ ಕುಮಾರ್ ದೀಕ್ಷಿತ್ ಶ್ರೀಕೃಷ್ಣನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸಂಜೀವನಿ ಟ್ರಸ್ಟಿನ ಸತೀಶ್, ಡ್ರೀಮ್ಸ್ ಟ್ರಸ್ಟಿನ ರಾಮಪ್ರಸಾದ್ ಸಂಗೀತ ಶಿಕ್ಷಕಿ ಭಾಗ್ಯಲಕ್ಷ್ಮೀ, ಶಿಕ್ಷಕಿ ಜ್ಯೋತಿ, ದೇವಕಿ, ನಂದಿನಿ, ಜ್ಯೋತಿ ಹಾಗೂ ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net