ಚಾಮರಾಜನಗರ: ನಗರದ ಗ್ರಾಮ ದೇವತೆ ಶ್ರೀಮುದುಕು ಮಾರಮ್ಮ ಅಮ್ಮನವರ ಸನ್ನಿಧಿಯಲ್ಲಿ ಆ.28 ರಂದು ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ.
ಅಂದು ಬೆಳಗ್ಗೆ 9 ಗಂಟೆಗೆ ಗಣಪತಿ ಪೂಜಾ, ಪುಣ್ಯಾಹ, ದೇವ ನಾಂದಿ, ಪಂಚಗವ್ಯ, ಕಲಶ ಸ್ಥಾಪನೆ, ಗಣಪತಿ ಹೋಮ, ನವಗ್ರಹ, ದುರ್ಗಾ ಹೋಮ ಹಾಗೂ ದೇವಿಗೆ ರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾ ಪೂರ್ಣಾಹುತಿಯೊಂದಿಗೆ ಸಂಪನ್ನವಾಗಲಿದೆ. ಪ್ರಸಾದ ವಿತರಣೆ ಮಾಡಲಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮಾರಿಗುಡಿ ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.