

ಚಾಮರಾಜನಗರ: ನಕಲಿ ದಾಖಲೆ ಸೃಷ್ಠಿಸಿ ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿಕೊಂಡಿದ್ದಲ್ಲಿ ಸ್ವ ಇಚ್ಚೆಯಿಂದ ಕಾರ್ಮಿಕರ ಕಲ್ಯಾಣ ಮಂಡಳಿಗೆ ಗುರುತಿನ ಚೀಟಿಯನ್ನು ಹಿಂತಿರುಗಿಸುವಂತೆ ಕಾರ್ಮಿಕ ಇಲಾಖೆ ಸೂಚಿಸಿದೆ.
ನಕಲಿ ದಾಖಲೆ ಸೃಷ್ಠಿಸಿ ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿಕೊಂಡಿದ್ದಲ್ಲಿ ಸ್ವ ಇಚ್ಚೆಯಿಂದ ಮಂಡಳಿಗೆ ಗುರುತಿನ ಚೀಟಿಯನ್ನು ಹಿಂತಿರುಗಿಸಿದ್ದಲ್ಲಿ ಮುಂದಿನ ಕಾನೂನು ಕ್ರಮವನ್ನು ಕೈಬಿಡಲಾಗುವುದು. ಇಲ್ಲವಾದಲ್ಲಿ ಇಲಾಖಾ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ ನಕಲಿ ದಾಖಲೆ ಸೃಷ್ಠಿಸಿ ಗುರುತಿನ ಚೀಟಿ ಮತ್ತು ಸೌಲಭ್ಯಗಳನ್ನು ಪಡೆದವರ ವಿರುದ್ದ ಕಾನೂನು ರೀತ್ಯ ಸಕ್ಷಮ ಪ್ರಾಧಿಕಾರದಲ್ಲಿ ಮೊಕದ್ದಮೆ ದಾಖಲಿಸಲಾಗುವುದು.
ಕಟ್ಟಡ ಕಾರ್ಮಿಕರಲ್ಲದವರಿಗೆ (ಬೋಗಸ್ ಕಾರ್ಮಿಕರಿಗೆ) ಸುಳ್ಳು ಉದ್ಯೋಗ ಪ್ರಮಾಣ ಪತ್ರ ನೀಡುವ/ನೀಡಿರುವ ಮಾಲೀಕರ, ಗುತ್ತಿಗೆದಾರ, ಸಂಸ್ಥೆ, ಪ್ರಾಧಿಕಾರ, ಕಾರ್ಮಿಕ ಸಂಘಟನೆಗಳು ಉದ್ಯೋಗ ಪ್ರಮಾಣ ಪತ್ರ ನೀಡುವುದನ್ನು ರದ್ದುಗೊಳಿಸಲಾಗುವುದು. ಅಲ್ಲದೇ ಭಾರತೀಯ ದಂಡ ಸಂಹಿತೆ ಪ್ರಕಾರ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.