ಡಿಸಿ ಸಹಕಾರ ಕೋರಿದ ಸದಸ್ಯರು

23rajesh1
Published on

ಚಾಮರಾಜನಗರ: ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ವತಿಯಿಂದ ಸೆ.21ರಂದು ನಗರದಲ್ಲಿ ಆಯೋಜಿಸಿರುವ ಪ್ರಥಮ ಸುಗಮ ಸಂಗೀತ ಸಮ್ಮೇಳನಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಪರಿಷತ್ತಿನ ಸದಸ್ಯರು ಕೋರಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಶಿಲ್ಪಾನಾಗ್ ಅವರನ್ನು ಗುರುವಾರ ಭೇಟಿ ಮಾಡಿದ ಪರಿಷತ್ತಿನ ಸದಸ್ಯರು ಸನ್ಮಾನ ಮಾಡಿ ಸಹಕಾರ ಕೋರಿದರು. ಸಮ್ಮೇಳನದ ಅಧ್ಯಕ್ಷರಾಗಿ ಸಿ.ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಎಂ.ನರಸಿಂಹ ಮೂರ್ತಿ, ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಬಸವರಾಜು, ಗೌರವಾಧ್ಯಕ್ಷ ಗಣೇಶ್ ದೀಕ್ಷಿತ್, ಕಾರ್ಯದರ್ಶಿ ಎಸ್.ನಟರಾಜು, ಜಿ.ರಾಜಪ್ಪ, ಜೆ ಬಿ.ಮಹೇಶ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net