ಜೂಜಾಡುತ್ತಿದ್ದ 10 ಜನರ ಬಂಧನ

Crime Logo
Published on

ಚಾಮರಾಜನಗರ: ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 10 ಜನರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಶನಿವಾರ ಬಂಧಿಸಲಾಗಿದೆ.
ಹನೂರು ತಾಲೂಕಿನ ಮುತ್ತುಶೆಟ್ಟಿಯೂರು ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಶಿವಕುಮಾರ್, ಮುತ್ತಪ್ಪ, ನಂದೀಶ್, ಶಿವಕುಮಾರ್, ನಾಗರಾಜು, ಪ್ರಸಾದ್ ಅವರನ್ನು ಬಂಧಿಸಿ 12,500 ರೂ. ಗಳ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕುದೇರುಮೋಳೆ ಗ್ರಾಮದ ಬರಹಳ್ಳಿ ಸರ್ಕಾರಿ ಜಾಗದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಕುದೇರು ಗ್ರಾಮದ ಗುರಪ್ಪ, ಮೂಡಲ ಅಗ್ರಹಾರ ಗ್ರಾಮದ ಮೂರ್ತಿ, ಮಹದೇವಕುಮಾರ್, ನಿಂಗಶೆಟ್ಟಿ ಸೇರಿ 4 ಜನ ಆರೋಪಿಗಳನ್ನು ಬಂಧಿಸಿ, ಸ್ಥಳದಲ್ಲಿದ್ದ 12,340 ರೂ.ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net