ಪಿಡಬ್ಲ್ಯೂಡಿ ನೂತನ ಎಇಇಗೆ ಸನ್ಮಾನ

17raju3
Published on

ಚಾಮರಾಜನಗರ: ಲೋಕೋಪಯೋಗಿ ಇಲಾಖೆಯ ನೂತನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡ ವಿ.ರಮೇಶ್ ಅವರನ್ನು ಗುತ್ತಿಗೆದಾರರು ಸನ್ಮಾನಿಸಿದರು.

ನಗರದ ಲೋಕೋಪಯೋಗಿ ಇಲಾಖೆಯ ವಿಭಾಗೀಯ ಕಚೇರಿಯಲ್ಲಿರುವ ಸನ್ಮಾನ ಸ್ವೀಕರಿಸಿದ ರಮೇಶ್ ಮಾತನಾಡಿ, ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರ ಸಹಕಾರದಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ತಾಲೂಕಿನ ರಸ್ತೆ, ಶಾಲಾ ಕಟ್ಟಡ ನಿರ್ಮಾಣ, ಮೂಲಸೌಲಭ್ಯಗಳನ್ನು ಕಲ್ಪಿಸಿ, ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಗುತ್ತಿಗೆದಾರರಾದ ಎಂ.ಎಸ್.ಮಾದಯ್ಯ, ವೈ.ಪಿ.ರಾಜೇಂದ್ರಪ್ರಸಾದ್, ಹೊಸೂರು ಜಗದೀಶ್, ಸಿ.ಕೆ.ಮಂಜುನಾಥ್, ಕೆಂಪನಪುರ ಮಹದೇವಸ್ವಾಮಿ, ಕಣ್ಣೇಗಾಲ ಕೃಷ್ಣನಾಯಕ, ಕುಮಾರ್, ಚೆನ್ನಬಸಪ್ಪ, ಬೆಳ್ಳಿಗೌಡರು, ಬಾಬು, ಮಹದೇವು, ಎಇ ರಾಜು, ಎಇಇ ರವಿಕುಮಾರ್, ಶಿವಕುಮಾರ್ ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net