ಕಳಪೆ ಆಹಾರ ಪೂರೈಸುವ ಹೋಟೆಲ್‌ಮೇಲೆ ಕ್ರಮವಹಿಸಿ

Published on

ಚಾಮರಾಜನಗರ: ನಗರದ ಹಲವಾರು ಹೋಟೆಲ್‌ಗಳಲ್ಲಿ ಇತ್ತೀಚೆಗೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದ್ದು, ಈ ಕುರಿತು ನಗರಸಭಾ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಇರ್ಷಾದ್ (ಚೋಟು) ಒತ್ತಾಯಿಸಿದ್ದಾರೆ.

ನಗರದ ಗಾಳಿಪುರ ರಸ್ತೆಯಲ್ಲಿನ ಇಲಿಯಾಸ್ ಬಿರಿಯಾನಿ ಹೋಟೆಲ್ನಲ್ಲಿ ಶುಕ್ರವಾರ ಮಧ್ಯಾಹ್ನ ಊಟ ಮಾಡಲು ಹೋಗಿದ್ದ ಸಂಧರ್ಭದಲ್ಲಿ, ಊಟವು ತುಂಬಾ ಗಬ್ಬುವಾಸನೆಯಿಂದ ಕೂಡಿತ್ತು. ಊಟ ಮಾಡಲು ಯೋಗ್ಯವಾಗಿಲ್ಲದ ಸ್ಥಿತಿ ಇತ್ತು. ಈ ಬಗ್ಗೆ, ಹೋಟೆಲ್ ಮಾಲೀಕರಿಗೆ ತಿಳಿಸಿದಾಗ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ನಗರ ಸಭೆಯ ಆರೋಗ್ಯ ನಿರೀಕ್ಷಕರಿಗೆ ದೂರವಾಣಿ ಮೂಲಕ ದೂರು ನೀಡಿದರು ಯಾವುದೇ ಕ್ರಮವಹಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ.

ಈ ಹೊಟೇಲ್‌ನ ಮಾಂಸಹಾರಿ ಊಟಕ್ಕಾಗಿ ಗ್ರಾಮೀಣ ಭಾಗದಿಂದಲೂ ಹೆಚ್ಚಿನ ಜನರು ಬರುತ್ತಾರೆ. ಆದರೆ ಈ ಹೋಟೆಲ್ ಯಾವುದೇ ಸ್ವಚ್ಛತೆಯಿಂದ ಕೂಡಿಲ್ಲ, ಸಂಭಂದ ಪಟ್ಟ ಯಾವುದೇ ಇಲಾಖೆಗಳಿಂದಲೂ ಅನುಮತಿ ಪಡೆದಿರುವುದಿಲ್ಲ. ಆದ್ದರಿಂದ ನಗರ ಸಭೆಯ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಸಾರ್ವಜನಿಕರ ಆರೋಗ್ಯ ಕಾಪಾಡಬೇಕು.

ಕಳಪೆ ಆಹಾರವನ್ನು ಗ್ರಾಹಕರಿಗೆ ನೀಡಿ ಗ್ರಾಹಕರ ಆರೋಗ್ಯವನ್ನು ಹಾಳು ಮಾಡುತ್ತಿರುವ ಈ ಹೋಟೆಲ್ ಮೇಲೆ ನಗರಸಭೆಯ ಆರೋಗ್ಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕಾಗಿ ಆಗ್ರಹಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net