ಆದಿ ಜಾಂಬವ ಸಮುದಾಯ ಜಾಗೃತರಾಗಿ

070
Published on

ಚಾಮರಾಜನಗರ: ಮಾದಿಗ ಸಮುದಾಯದ ಅಭಿವೃದ್ದಿಗೆ ಸಹಕಾರ ಸಂಘ ಸ್ಥಾಪನೆ ಅಗತ್ಯವಾಗಿದೆ ಎಂದು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜ್ ಹೇಳಿದರು.

ತಾಲೂಕಿನ ಸಂತೇಮರಹಳ್ಳಿ ಎಪಿಎಂಸಿ ಆವರಣದಲ್ಲಿ ಜಿಲ್ಲಾ ಅರುಂಧತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ಮಿಸುವ ಸಂಬಂಧ ಭಾನುವಾರ ಆಯೋಜಿಸಿದ್ದ ಮುಖಂಡರಗಳ ಪೂರ್ವಭಾವಿ ಸಭೆಯಲ್ಲಿ ಅವರುಮಾತನಾಡಿದರು.

ಜಿಲ್ಲೆಯಲ್ಲಿ ಆದಿಜಾಂಬವ ಸಮಾಜವು ಆರ್ಥಿಕವಾಗಿ ಅಭಿವೃದ್ದಿಯಾಗಲೂ ಸಮುದಾಯದ ಪ್ರತಿಯೊಬ್ಬರೂ ಸಹಕಾರ ಬಹಳ ಅವಶ್ಯಕವಾಗಿದೆ. ಉತ್ತಮ ಸಹಕಾರ ಸಂಘವನ್ನು ಸ್ಥಾಪಿಸಿಕೊಂಡು ಆರ್ಥಿಕವಾಗಿ ಹಿಂದುಳಿದಿರುವ ಆದಿಜಾಂಬವ ಸಮಾಜವನ್ನು ಜಾಗೃತಗೊಳಿಸಿ ಅಭಿವೃದ್ದಿಯತ್ತ ಕೊಂಡೊಯ್ಯುವ ಕೆಲಸ ಮಾಡೋಣ ಎಂದರು.

ಸಹಕಾರ ಸಂಘಗಳ ನಿವೃತ್ತ ಉಪನಿರ್ದೇಶಕ ಇರಸವಾಡಿ ಸಿ.ಮಹದೇವಯ್ಯ, ಅರಕಲವಾಡಿ ಜವರಯ್ಯ, ರೇವಣ್ಣ, ಇಗ್ಗಲೂರು ಹನುಮಂತರಾಜು, ನಿವೃತ್ತ ನೌಕರರ ಚಿಕ್ಕಮಾದಯ್ಯ, ಸಿವಿಲ್ ಗುತ್ತಿಗೆದಾರ ಕಾಗಲವಾಡಿ ಮಹದೇವಸ್ವಾಮಿ, ನಾಗರಾಜ್, ವಕೀಲ ಬೂದಿತಿಟ್ಟು ರಾಜೇಂದ್ರ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net