ಸದಸ್ಯರ ಸಂಖ್ಯೆ ಹೆಚ್ಚಾದರೆ ಸಂಘ ಅಭಿವೃದ್ಧಿ

11rajesh4
Published on

ಚಾಮರಾಜನಗರ: ಸಹಕಾರ ಸಂಘಗಳ ಅಭಿವೃದ್ಧಿಗೆ ಸಾಲದ ಮರುಪಾವತಿ ಜತೆಗೆ ಸದಸ್ಯತ್ವದ ಹೆಚ್ಚಳವೂ ಸಹಕಾರಿಯಾಗಲಿದೆ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಮೇಲ್ವಿಚಾರಕ ಪಿ.ಮಂಜು ಹೇಳಿದರು.

ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ಇತ್ತೀಚಿಗೆ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಸಹಕಾರ ಸಂಘಗಳು ಕೃಷಿ ಚಟುವಟಿಕೆ ಸೇರಿದಂತೆ ಹೈನುಗಾರಿಕೆ ಕಸುಬು ಕೈಗೊಳ್ಳಲು ಸಾಲ ನೀಡುತ್ತವೆ. ಇದಲ್ಲದೆ ಮಹಿಳಾ ಹಾಗೂ ಪುರುಷರ ಸ್ವ-ಸಹಾಯ ಗುಂಪುಗಳ ಸದಸ್ಯರು ಆರ್ಥಿಕವಾಗಿ ಸಬಲರಾಗಲು ಸಂಘ ಸಾಲ ಒದಗಿಸುತ್ತದೆ. ಸಾಲ ಪಡೆದವರು ಸಕಾಲಕ್ಕೆ ಸಾಲಮರುಪಾವತಿ ಮಾಡಬೇಕು. ಇದರಿಂದ ಬೇರೆಯವರಿಗೆ ಸಾಲ ನೀಡಲು ಸಹಕಾರಿಯಾಗುತ್ತದೆ ಎಂದರು.

ಸಂದ ಅಧ್ಯಕ್ಷ ವಿ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದೊಡ್ಡಶೆಟ್ಟಿ, ನಿರ್ದೇಶಕರಾದ ಲೋಕೇಶ್, ಡಿ.ವಿ.ಮಲ್ಲೇಶ್, ರಾಜಣ್ಣ, ಗೋಪಾಲ್, ರಾಚಯ್ಯ, ಎಚ್.ರಂಗನಾಥ, ಕೃಷ್ಣಶೆಟ್ಟಿ, ಚಂದ್ರಕಲಾ, ಲಕ್ಷ್ಮೀ, ಮುಖ್ಯ ಾರ್ಯನಿರ್ವಾಹಕ ವಿ.ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net