ಮಹಂತಾಳಪುರದಲ್ಲಿ ಚಿರತೆ ಸೆರೆ

Published on

ಚಾಮರಾಜನಗರ: ತಾಲೂಕಿನ ಮಹಂತಾಳಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಭಾನುವಾರ ರಾತ್ರಿ ಸೆರೆಯಾಗಿದೆ.

ಮಹಂತಾಲಪುರ ಗ್ರಾಮದ ಕಲ್ಲುಕ್ವಾರಿಯಲ್ಲಿ ಜೋಡಿ ಚಿರತೆಗಳು ಆಗಾಗ್ಗೆ ಕಾಣಿಸಿಕೊಳ್ಳುವ ಮೂಲಕ ಆತಂಕವನ್ನು ಉಂಟುಮಾಡಿತ್ತು. ಇದರಿಂದಾಗಿ ಮಹಂತಾಳಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಚಿರತೆ ನೀಡುತ್ತಿದ್ದ ಉಪಟಳದಿಂದ ಬೇಸತ್ತು ಹೋಗಿದ್ದರು. ಚಿರತೆಗಳು ಜಾನುವಾರುಗಳನ್ನು ಕೊಂಡು ಹಾಕುತ್ತಿದ್ದ ಪರಿಣಾಮವಾಗಿ ಜನರು ಭಯಭೀತರಾಗಿದ್ದರು.

ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಇರಿಸಿದ್ದರು. ಭಾನುವಾರ ರಾತ್ರಿ ಬೋನಿಗೆ ಒಂದು ಚಿರತೆ ಸೆರೆಯಾಗಿದ್ದು, ಈ ಭಾಗದ ಜನರು ಮತ್ತೊಂದು ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net