ಚಾಮರಾಜನಗರ: ಕರ್ನಾಟಕ ನಾಟಕ ಅಕಾಡೆಮಿ ಕೊಡಮಾಡುವ 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ರಂಗ ಕಲಾವಿದರು ಆಯ್ಕೆಯಾಗಿದ್ದಾರೆ. ಚಾಮರಾಜನಗರದ ಹಿರಿಯ ರಂಗಭೂಮಿ ಕಲಾವಿದ, ಪತ್ರಕರ್ತ ಅಬ್ರಹಾಂ ಡಿ.ಸಿಲ್ವಾ ಹಾಗೂ ಜೆಎಸ್‌ಎಸ್ ಸಂಸ್ಥೆ ರಂಗ ಶಿಕ್ಷಕ ಚಂದ್ರಶೇಖರ್ ಆಚಾರ್ ಹೆಗ್ಗೋಠಾರ ಅವರ ರಂಗಭೂಮಿ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಸ್ತುತ ಅಬ್ರಹಾಂ ಡಿ.ಸಿಲ್ವಾ ಶಾಂತಲಾ ಕಲಾವಿದರು ತಂಡದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಟಕಗಳ ನಿರ್ದೇಶನ, ನಿರ್ವಹಣೆ ಮಾಡಿದ್ದಾರೆ. ಜಿರ್ಜಿಂಬೆ, ಚಿರತೆ ಬಂತು ಚಿರತೆ, ಅನ್ನ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಂದ್ರಶೇಖರ್ ಆಚಾರ್ ಹೆಗ್ಗೋಠಾರ ನೀನಾಸಂ ಪದವೀಧರರಾಗಿದ್ದು, ನಟನೆ, ನಿರ್ದೇಶನ, ರಂಗ ಸಂಗೀತದಲ್ಲಿ ಖ್ಯಾತಿ ಗಳಿಸಿದ್ದಾರೆ.