ಬಿ.ರಾಚಯ್ಯ ನಾಮಫಲಕ ಅಳವಡಿಸುವಂತೆ ಮನವಿ

06rajesh3
Published on

ಚಾಮರಾಜನಗರ: ನಗರದ ಜೋಡಿ ರಸ್ತೆಯಲ್ಲಿ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ನಾಮಫಲಕ ಮತ್ತು ಬೃಹತ್ ಕಮಾನು ಅಳವಡಿಸುವಂತೆ ಒತ್ತಾಯಿಸಿ ಎನ್‌ಎಸ್‌ಯುಐ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನವಿ ಸಲ್ಲಿಸಲಾಯಿತು. ಮಾಜಿ ರಾಜ್ಯಪಾಲ ಬಿ.ರಾಚಯ್ಯ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಜೋಡಿ ರಸ್ತೆಯ ಅಗಲೀಕರಣ ಸಂದರ್ಭದಲ್ಲಿ ಅವರ ನಾಮಫಲಕವನ್ನು ತೆರವುಗೊಳಿಸಲಾಗಿತ್ತು. ಆದರೆ ರಸ್ತೆಯು ಅಗಲೀಕರಣವಾಗಿ ಸುಮಾರು 6 ವರ್ಷಗಳು ಕಳೆದರೂ ಇಲ್ಲಿಯವರೆಗೂ ನಾಮಫಲಕ ಮತ್ತು ಕಮಾನು ಗೇಟ್‌ನ್ನು ಅಳವಡಿಸಿರುವುದಿಲ್ಲ. ಈ ನಿಟ್ಟಿನಲ್ಲಿ ನಾಮಫಲಕವನ್ನು ಮತ್ತು ಕಮಾನುಗೇಟ್‌ನ್ನು ಈ ಕೂಡಲೇ ಪಚ್ಚಪ್ಪವೃತ್ತದ ಬಳಿ ಅಳವಡಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಮೋಹನ್ ನಗು, ಉಪಾಧ್ಯಕ್ಷ ದಸ್ತಗಿರ್, ಮುತ್ತುರಾಮು, ತಾ.ಅಧ್ಯಕ್ಷ ಶಶಾಂಕ್, ಕಾರ್ಯದರ್ಶಿ ಪ್ರದೀಪ್, ದರ್ಶನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net