

ಚಾಮರಾಜನಗರ: ತಾಲೂಕು ಮಟ್ಟದ ಶಾಲಾ ಶಿಕ್ಷಣ ಇಲಾಖೆ ಕಾಲೇಜು ಕ್ರೀಡಾಕೂಟದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಎಲ್ಲ ಆಟೋಟಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಮಗ್ರ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 100, 200, 400 ಹಾಗೂ 1500 ಮೀಟರ್ ಓಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 3000 ಮೀಟರ್ ಓಟದಲ್ಲಿ ತೃತೀಯ ಸ್ಥಾನ, ಖೋ ಖೋ ಪ್ರಥಮ, ವಾಲಿಬಾಲ್, ಪುಟ್‌ಬಾಲ್, ಚೆಸ್ ದ್ವಿತೀಯ, ಗುಡ್ಡಗಾಡು ಓಟ ಪ್ರಥಮ, ದ್ವಿತೀಯ, ತೃತೀಯ, ಹಾಗೂ ಉದ್ದ ಜಿಗಿತ, ಎತ್ತರ ಜಿಗಿತ, ಭರ್ಜಿ ಎಸೆತ, ಹ್ಯಾಮರ್ ಥ್ರೋ, ಚಕ್ರ ಎಸೆತ ಪ್ರಥಮ, ಎರಡು ವಿಭಾಗದ ರೀಲೆ ಪ್ರಥಮ ಹಾಗೂ ವಿದ್ಯಾರ್ಥಿ ಎನ್.ಮನೋಜ್ ವೈಯುಕ್ತಿಕ ಚಾಂಪಿಯನ್ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಾಲೇಜಿಗೆ ಸಮಗ್ರ ಪ್ರಶಸ್ತಿ ತಂದು ಕೊಟ್ಟ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಅಭಿನಂದಿಸಿದ ಕಾಲೇಜು ಪ್ರಾಂಶುಪಾಲ ಎಂ. ಸೋಮಣ್ಣ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ನಡೆಯುವ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಹೆಚ್ಚು ಸಾಧನೆ ಮಾಡಿ ಕಾಲೇಜಿಗೆ ಜಿಲ್ಲೆಗೆ ಹೆಸರು ತರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಟಿ.ಮಧು, ರಂಗಸ್ವಾಮಿ, ಸವಿತ, ಜಿ.ಪಿ.ಶೀಲಾ, ಸುನಿಲ್ ಸತ್ಯದಾಸ್, ಎಸ್.ರಾಮಕೃಷ್ಣ, ಎಂ.ಮಹದೇವಸ್ವಾಮಿ, ಸಚ್ಚಿಂದ್ರನಾಗ್, ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ್ ಹಾಗೂ ಇತರರು ಹಾಜರಿದ್ದರು.