ಚಾಮರಾಜನಗರ: ಭಾರತೀಯ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಯಡಪುರ ಗ್ರಾಮದ ಸರ್ವೇ ನಂ.124ರಲ್ಲಿ ನಿರ್ಮಾಣವಾಗುತ್ತಿರುವ ರೆಡ್ ಕ್ರಾಸ್ ಶತಮಾನೋತ್ಸವ ಭವನದಲ್ಲಿ ಬ್ಯಾಂಕ್ ಶಾಖೆ ಆರಂಭಿಸಲು ಸ್ಥಳ ನಿಗದಿಪಡಿಸಲಾಗಿದ್ದು, ಬ್ಯಾಂಕ್ ಶಾಖಾ ಕಚೇರಿ ಮತ್ತು ಎ.ಟಿ.ಎಂ ನಡೆಸಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಇ.ಒ.ಐ (ಎಕ್ಸ್‌ಪೀರಿಯನ್ಸ್ ಆಫ್ ಇನ್ಟ್ರೇಸ್ಟ್) ಆಹ್ವಾನಿಸಲಾಗಿದೆ.
ಬ್ಯಾಂಕ್ ಆರಂಭಿಸಲು ಆಸಕ್ತಿಯಿರುವ ರಾಷ್ಟ್ರೀಕೃತ ಬ್ಯಾಂಕ್‌ನವರು ಇ.ಓ.ಐ ಯನ್ನು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಯವರಿಗೆ ಆ.10 ರೊಳಗೆ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಚಾಮರಾಜನಗರ ಶಾಖೆಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.