ಶಿಶುಗಳ ಪರಿಪೂರ್ಣ ಬೆಳವಣಿಗೆಗೆ ಸ್ತನ್ಯಪಾನ ಅಗತ್ಯ

03rajesh6
Published on

ಚಾಮರಾಜನಗರ: ಶಿಶುಗಳ ಪರಿಪೂರ್ಣ ಬೆಳವಣಿಗೆಗೆ ತಾಯಿಯ ಎದೆ ಹಾಲು ಅತ್ಯಂತ ಸಹಕಾರಿಯಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ದೀಪ ಸಲಹೆ ನೀಡಿದರು.

ತಾಲೂಕಿನ ಹರದನಹಳ್ಳಿ ಸಮೀಪದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ತನ್ಯಪಾನ ಅರಿವು ಸಪ್ತಾಹ ಆಚರಣೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಶುಗಳಲ್ಲಿ ಉತ್ತಮ ಮೂಳೆಯ ಬೆಳವಣಿಗೆ, ಉತ್ತಮ ರೋಗನಿರೋಧಕ ಶಕ್ತಿ ಹಾಗೂ ದಕ್ಷ ಬುದ್ಧಿಮತ್ತೆಗೆ ತಾಯಿಯ ಎದೆಯಾಲು ಸಹಕಾರಿಯಾಗಿದೆ. ಪೌಷ್ಟಿಕ ಕೈತೋಟದ ಉತ್ಪಾದನೆಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಹಲವು ಆರೋಗ್ಯ ಅನುಕೂಲಗಳು ಆಗುತ್ತದೆ. ಈ ನಿಟ್ಟಿನಲ್ಲಿ ವಿವಿಧ ರೀತಿಯ ಹಣ್ಣು ಮತ್ತು ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಬಳಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ಮೋಹನ್ ಕುಮಾರ್ ಹಾಗೂ 50 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net