

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಆದಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಗುರುವಾರ ಸಂಜೆ ಪಂಜಿನ ಮೆರವಣಿಗೆ ನಡೆಸುವ ಮೂಲಕ ಮೂಲಕ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸಂವಿಧಾನ ಪೀಠಿಕೆ ಓದುವ ಮೂಲಕ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗವು 148 ಕಾಲೋನಿಗಳಲ್ಲಿ ವಾಸವಾಗಿದ್ದು, ಸುಮಾರು 47 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಹಾಡಿಗಳು ಮಾತ್ರ ಇನ್ನೂ ವಿದ್ಯುತ್ ಅನ್ನೇ ಕಂಡಿಲ್ಲ. ಅಲ್ಲದೇ, 2000 ಜನರಿಗೆ ರೇಷನ್ ಕಾರ್ಡ್, 3000 ಜನರಿಗೆ ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸಿಕ್ಕಿಲ್ಲ ಹಾಗೂ ಹಕ್ಕುಪತ್ರ ನೀಡಿರುವ ಭೂಮಿಗಳಿಗೆ ಆರ್‌ಟಿಸಿಯನ್ನು ಕೊಡದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಯಿಂದ ನರೇಗಾ ಕೆಲಸಗಳನ್ನು ನೀಡದೆ ಜನರು ವಲಸೆ ಹಾಗೂ ಜೀತ ಪದ್ಧತಿಗೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಎಲ್ಲಾ ಸಮಸ್ಯೆಗಳಿಂದ ಬುಡಕಟ್ಟು ಜನರ ದಿನನಿತ್ಯದ ನರಕದ ಜೀವನವನ್ನು ನೆಡೆಸುತ್ತಿದ್ದಾರೆ. ಸರ್ಕಾರವು ಬುಡಕಟ್ಟು ಜನಾಂಗದವರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಗಿರೀಶ್, ಪ್ರವೀಣ್, ಮಾದಮ್ಮ, ಮಾರ, ಪಾಂಡ್ಯ, ಚಿಕ್ಕಮಾದಮ್ಮ, ಮಾದೇವಿ, ಕೆಂಪಮ್ಮ, ಮಾಸ್ತಮ್ಮ, ಮಂಗಳಮ್ಮ, ನೀಲಯ್ಯ, ಮುರುಗೇಶ, ಕೆಂಪರಾಜು, ಸೀನಯ್ಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.