ವಿದ್ಯುತ್ ಪ್ರವಹಿಸಿ ಲೈನ್‌ಮ್ಯಾನ್‌ಗೆ ಗಂಭೀರಗಾಯ

01rajesh8
Published on

ಚಾಮರಾಜನಗರ: ಶ್ರೀಚಾಮರಾಜೇಶ್ವರ ರಥೋತ್ಸವದ ವೇಳೆ ವಿದ್ಯುತ್ ಕಂಬಗಳಲ್ಲಿ ತೆರವುಗೊಳಿಸಿದ್ದ, ವಿದ್ಯುತ್ ತಂತಿಯನ್ನು ಕಟ್ಟುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಲೈನ್‌ಮ್ಯಾನ್‌ಗೆ ಗಂಭೀರವಾದ ಗಾಯವಾಗಿದೆ.

ತಾಲೂಕಿನ ದೊಡ್ಡಮೋಳೆ ಗ್ರಾಮದ ಕಿರಣ್(26) ಗುರುವಾರ ನಗರದ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ವಿದ್ಯುತ್ ಕಂಬದಲ್ಲಿ ವಿದ್ಯುತ್ ತಂತಿಯನ್ನು ಅಳವಡಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ.

ಈ ವೇಳೆ ಲೈನ್‌ಮ್ಯಾನ್ ಕಿರಣ್ ಅವರನ್ನು ಜತೆಗಿದ್ದ ಲೈನ್‌ಮ್ಯಾನ್‌ಗಳು ಕಂಬದಿಂದ ಕೆಳಗಿಳಿಸಿ ಚಿಕಿತ್ಸೆಗಾಗಿ ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕಿರಣ್ ಅವರಿಗೆ ಗಂಭೀರವಾದ ಗಾಯವಾದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net