

ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ.ಆರ್.ಧ್ರುವನಾರಾಯಣ್ ಅವರು ದೇಶದಲ್ಲೇ ಉತ್ತಮ ಸಂಸದೀಯಪಟುವಾಗಿದ್ದರು ಎಂದು ಪಶುಸಂಗೋಪನಾ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ.ಸುಗಂಧರಾಜು ತಿಳಿಸಿದರು.
ತಾಲೂಕಿನ ಕರಡಿಮೋಳೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚೇತನ ಕಲಾವಾಹಿನಿ ಸಂಸ್ಥೆ ವತಿಯಿಂದ ಆರ್.ಧ್ರುವನಾರಾಯಣ್ ಜನ್ಮದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಸಮವಸ್ತ್ರ ನೋಟ್‌ಪುಸ್ತಕ, ಲೇಖನ ಸಾಮಾಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆರ್.ಧ್ರುವನಾರಾಯಣ್ ಶಾಸಕರಾಗಿ, ಸಂಸದರಾಗಿ, ಶಿಕ್ಷಣ-ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು. ಉಪನ್ಯಾಸಕ ಡಾ.ಎಂ.ಕುಮಾರ್ ಮಾತನಾಡಿ, ಆರ್.ಧ್ರುವನಾರಾಯಣ್ ಅವರು ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದು, ಎಲ್ಲ ಸಮುದಾಯದವರ ಪ್ರೀತಿ, ವಿಶ್ವಾಸವನ್ನುಗಳಿಸಿದ್ದರು. ಪ್ರಬುದ್ಧ ರಾಜಕಾರಣಿಯಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಡಾ.ನಾಗೇಂದ್ರ, ಡಾ. ದೊಡ್ಡರಾಜು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾಗೇಂದ್ರನಾಯಕ, ದೊರೆಸ್ವಾಮಿ, ನಾಗೇಂದ್ರ, ನಾಗಮಹದೇವ, ಗ್ರಾ.ಪಂ.ಮಾಜಿ ಸದಸ್ಯ ಡಿ.ಪಿ.ರಾಜು, ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ,ಚೇತನ ಕಲಾವಾಹಿನಿ ಸಂಸ್ಥೆಯ ಅಧ್ಯಕ್ಷ ಜಿ.ರಾಜಪ್ಪ, ಕಾರ್ಯದರ್ಶಿ ಎಂ.ಮಂಜುನಾಥ್, ಶಾಲೆಯ ಮುಖ್ಯಶಿಕ್ಷಕಿ ಬಿ.ಎಸ್.ಲತಾ, ಸಹಶಿಕ್ಷಕ ಸೋಮಣ್ಣ ಇತರರು ಹಾಜರಿದ್ದರು