ಪಾತ್ರಗಳಿಗೆ ಜೀವ ತುಂಬುತ್ತಿದ್ದ ನಟಿ ಕಲ್ಪನಾ

Screenshot_20240724-104922_WhatsApp
Published on

ಚಾಮರಾಜನಗರ : ಸುಮಾರು 78ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ಕಲ್ಪನಾ ತಾವು ಅಭಿನಯಿಸಿದ ಎಲ್ಲ ಪಾತ್ರಗಳಿಗೂ ಜೀವ ತುಂಬುತ್ತಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ತಾಲೂಕು ಕಸಾಪ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಿನುಗುತಾರೆ ಕಲ್ಪನಾ ಸವಿನೆನಪು ಮತ್ತು ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿತ್ರನಟಿ ಕಲ್ಪನಾ ಕನ್ನಡ ಚಲನಚಿತ್ರರಂಗದ ಅಪ್ರತಿಮ, ಅದ್ಭುತ ಪ್ರತಿಭೆ. ತಮ್ಮ ಅಭಿನಯದ ಮೂಲಕ ಕನ್ನಡ ಚಲನಚಿತ್ರರಂಗದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು. ತಮ್ಮ ಪಾತ್ರಗಳಿಗೆ ಜೀವಂತಿಕೆ ತುಂಬಿ ನಟಿಸುತ್ತಿದ್ದ ಕಲ್ಪನಾ ಕನ್ನಡದ ಮರೆಯಲಾಗದ ಮಿನುಗುತಾರೆ ಎಂದು ತಿಳಿಸಿದರು.

ಬರಹಗಾರ ಎಸ್.ಲಕ್ಷ್ಮೀನರಸಿಂಹ, ಕನ್ನಡ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ, ಕನ್ನಡ ಸಾಹಿತ್ಯ ಪರಿಷತ್‌ನ ರವಿಚಂದ್ರಪ್ರಸಾದ್, ಬಿ.ಕೆ.ಆರಾಧ್ಯ, ಸರಸ್ವತಿ, ಶಿವಲಿಂಗಮೂರ್ತಿ, ಪಣ್ಯದ ಹುಂಡಿ ರಾಜು, ಸುರೇಶ್ ಗೌಡ, ಬೊಮ್ಮಾಯಿ, ಗೋವಿಂದರಾಜು, ಮಾದೇವಸ್ವಾಮಿ ,ಪರಮೇಶ್ವರಪ್ಪ, ಸತೀಶ್, ಮಹದೇವು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net