ಬಿ. ಬಾಲಚಂದ್ರ ಮೂರ್ತಿ ಅವಿರೋಧ ಆಯ್ಕೆ

BALACHANDRAMURTHY
Published on

ಚಾಮರಾಜನಗರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಬಿ. ಬಾಲಚಂದ್ರ ಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ನಗರದ ಸತ್ತಿ ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಕಚೇರಿಯಲ್ಲಿ ಬುಧವಾರ ನಡೆದ ತಾಲೂಕು ಘಟಕದ ಚುನಾವಣೆಯಲ್ಲಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಬಿ.ಬಾಲಚಂದ್ರ ಮೂರ್ತಿ ಒಬ್ಬರು ಹಾಗೂ 13 ನಿರ್ದೇಶಕರ ಸ್ಥಾನಗಳಿಗೆ 13 ಮಂದಿ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತಾಲೂಕು ಚುನಾವಣಾಧಿಕಾರಿಯಾಗಿದ್ದ ನಾಗಸುಂದರ್ ಅವರು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಣೆ ಮಾಡಿದರು.

ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಬಾಲಚಂದ್ರ ಮೂರ್ತಿ, ನಿರ್ದೇಶಕರಾಗಿ ಹೊಸೂರು ಜಗದೀಶ್, ಎಚ್.ಜಿ. ನಟರಾಜು, ಜಿ. ಮಲ್ಲಿಕಾರ್ಜುನ, ಎಂ. ಮಹೇಶ್, ಎನ್. ಮಹೇಶ್, ವಿ. ಗುರುಸ್ವಾಮಿ, ಜೆ.ಪಿ. ದೊರೆಸ್ವಾಮಿ, ಎ.ಬಿ. ನಾಗರಾಜು, ಸಿ.ಎಲ್. ನಾಗರಾಜು, ಕೆ.ಎಂ. ಪ್ರಸಾದ್, ಪ್ರಶಾಂತ್‌ಕುಮಾರ್, ಕೆ.ಎಂ.ಶ್ರೀಕಂಠಮೂರ್ತಿ, ಡಿ.ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಚುನಾವಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net