

ಚಾಮರಾಜನಗರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಮೂಡ್ಲುಪುರ ನಂದೀಶ್ ಗೆಲುವು ಸಾಧಿಸಿದ್ದಾರೆ. ಇವರ ವಿರುದ್ಧ ಸ್ಪರ್ಧೆ ಮಾಡಿದ್ದ ಕಾಡಾ ಮಾಜಿ ಅಧ್ಯಕ್ಷ ಹಂಗಳ ನಂಜಪ್ಪ ಸೋಲು ಕಂಡಿದ್ದಾರೆ.
ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಭಾನುವಾರ ಚುನಾವಣೆ ಮತ ಎಣಿಕೆ ನಡೆಯಿತು. ಇದರಲ್ಲಿ ಮೂಡ್ಲುಪುರ ನಂದೀಶ್ 1,571 ಮತ ಪಡೆದುಕೊಂಡಿದ್ದಾರೆ. ಇವರ ವಿರುದ್ಧ ಸ್ಪರ್ಧೆ ಮಾಡಿದ್ದ ಹಂಗಳ ನಂಜಪ್ಪ 1,380 ಮತಗಳನ್ನು ಗಳಿಸಿದರು. ನಂದೀಶ್ 191 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಗೆಲುವು ಪಡೆದ ಮೂಡ್ಲುಪುರ ನಂದೀಶ್ ಮಹಾಸಭಾದ ಹಾಲಿ ಜಿಲ್ಲಾ ಅಧ್ಯಕ್ಷರಾಗಿದ್ದರು. ಇವರ ವಿರುದ್ಧ ಸ್ಪರ್ಧೆ ಮಾಡಿದ್ದ ಕಾಡಾ ಮಾಜಿ ಅಧ್ಯಕ್ಷ ಹಂಗಳ ನಂಜಪ್ಪ ಪರವಾಗಿ ಹಲವು ಮುಖಂಡರು ಚುನಾವಣೆ ಪ್ರಚಾರ ಮಾಡಿದ್ದರು. ಮಹಾಸಭಾ ಚುನಾವಣೆ ಭರಾಟೆ ರಂಗೇರಿತ್ತು. ಇಬ್ಬರಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬ ಕುತೂಹಲ ಮನೆ ಮಾಡಿತ್ತು. ಅಂತಿಮವಾಗಿ ಮೂಡ್ಲುಪುರ ನಂದೀಶ್‌ಗೆ ವಿಜಯ ಒಲಿಯಿತು.
ಜಿಲ್ಲಾ ನಿರ್ದೇಶಕರ ಆಯ್ಕೆ:
ಉಮೇಶ್, ಗಿರೀಶ್, ಮನು ಶ್ಯಾನ್‌ಭೋಗ್, ಜಿ.ಗಿರೀಶ್, ಎಸ್.ಮಹದೇವಸ್ವಾಮಿ, ಎನ್.ಆರ್.ಪುರುಷೋತ್ತಮ, ಮಲ್ಲಿಕಾರ್ಜುನಪ್ಪ, ನಿರಂಜನ ಮೂರ್ತಿ, ಡಿ.ಪಿ.ಜಗದೀಶ್, ಟಿ.ಗುರು, ಕೆ.ಎಂ.ಬಸವರಾಜಪ್ಪ, ಕೆ.ಜಿ. ಗುರುಸ್ವಾಮಪ್ಪ, ಎಂ.ಮಂಜೇಶ್, ಮುರುಡೇಶ್ವರಸ್ವಾಮಿ, ಪಿ.ಇಂದ್ರ, ಕೆ.ಜಿ.ಮಂಜುನಾಥ್, ಮಲ್ಲಿ ಕಾರ್ಜುನಪ್ಪ, ಕೆ.ಆರ್.ಲೋಕೇಶ್, ವೈ.ರಾಜೇಂದ್ರ ಪ್ರಸಾದ್, ವೀರೇಂದ್ರ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.