ವಾಹನಗಳಿಗೆ ಲೈಸನ್ಸ್ ನೀಡಿರುವುದು ಸ್ವಾಗತಾರ್ಹ

058
Published on

ಚಾಮರಾಜನಗರ: ಮೋಟಾರ್ ಲ್‌ಟಿ ಮಾಡುವ ವಾಹನಗಳಿಗೆ ಲೈಸನ್ಸ್ ನೀಡಿರುವ ಸರ್ಕಾರ ನಿರ್ಧಾರವನ್ನು ಸಂಘದ ಅಧ್ಯಕ್ಷ ಗೌಡಿಕೆ ಪಿ. ನಾಗೇಶ್ ಸ್ವಾಗತಿಸಿದ್ದಾರೆ.

ಮೋಟರ್ ಲಿಪ್ಟಿಂಗ್ ವಾಹನಗಳಿಗೆ ಪರವಾನಗಿ ಇಲ್ಲದೇ ವಿಮೆ ಸೌಲಭ್ಯದಿಂದ ವಂಚಿತರಾಗಿದ್ದೆವು. ಕಾರ್ಮಿಕರು ಹಾಗೂ ರೈತರು, ಮೋಟಾರ್ ಲಿಪ್ಟಿಂಗ್ ಮಾಲೀಕರು ಬಹಳ ತೊಂದರೆ ಅನುಭವಿಸುತ್ತಿದ್ದರು. ಈ ವಾಹನಗಳಿಗೆ ಕ್ರೇನ್ ಆಳವಡಿಸಿದ ಕಾರಣದಿಂದಾಗಿ ಕಳೆದ ಹಲವಾರು ವರ್ಷಗಳಿಂದ ಸಾರಿಗೆ ಹಾಗೂ ಪೊಲೀಸ್ ಇಲಾಖೆಯಿಂದ ತೊಂದರೆಯಾಗುತ್ತಿತ್ತು. ಆದರೆ ಈಗ ಕಳೆದ ಎರಡು ವರ್ಷಗಳ ಹೋರಾಟ ಜಯ ದೊರೆಕಿದೆ ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಭಿನಂದನೆ ಸಲ್ಲಿಸಿದರು.

ಸುತ್ತೂರು ಶ್ರೀಗಳಾದ ಶ್ರೀಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರನ್ನು ಸಂಘದ ಎಲ್ಲ ಪದಾಧಿಕಾರಿಗಳು ಭೇಟಿ ಮಾಡಿ, ನಮ್ಮ ಕಷ್ಟವನ್ನು ಹೇಳಿಕೊಂಡೆವು. ಅವರು ಸರ್ಕಾರದ ಗಮನಕ್ಕೆ ತಂದರು. ಶ್ರಿಗಳ ಸೇವೆಯನ್ನು ಸ್ಮರಿಸುತ್ತೇವೆ ಎಂದರು.

ಸಂಘದ ಖಜಾಂಚಿ ಕಾಳನಹುಂಡಿ ರೇವಣ್ಣ, ಪ್ರಧಾನ ಕಾರ್ಯದರ್ಶಿ ನಾಗರಾಜ ಕೋಣನಪುರ, ಉಪಾಧ್ಯಕ್ಷ ಜಾಹೀರ್ ಅಹಮದ್, ನಾಗೇಂದ್ರ ತೆರಕಣಾಂಬಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net