ಚಾಮರಾಜನಗರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಲಚಂದ್ರ ಮೂರ್ತಿ ಅವರನ್ನು ಸ್ನೇಹಿತರು, ಹಿತೈಷಿಗಳು ಮುಖಂಡರು ಸನ್ಮಾನಿಸಿದರು.
ನಗರದ ಅಧ್ಯಕ್ಷ ಹೋಟೆಲ್‌ನಲ್ಲಿ ಬಾಲಚಂದ್ರಮೂರ್ತಿ ಅವರನ್ನು ಮುಖಂಡರಾದ ಬಿಸಲವಾಡಿ ಉಮೇಶ್, ಹೊನ್ನಹಳ್ಳಿ ಸಂಪತ್ತು, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಬೋಗಾಪುರ ನಾಗೇಂದ್ರ, ವಡ್ಡರಹಳ್ಳಿ ದೊರೆಸ್ವಾಮಿ, ಬಿಸಲವಾಡಿ ರವಿ, ಹಿರಿಬೇಗೂರು ಗುರುಸ್ವಾಮಿ, ತೊರವಳ್ಳಿಕುಮಾರ್, ಅಧ್ಯಕ್ಷ ಹೋಟೆಲ್ ಕುಮಾರ್, ಮಲ್ಲಿಕಾರ್ಜುನ್ ಸನ್ಮಾನಿಸಿದರು.