

ಚಾಮರಾಜನಗರ : ಪರಿಶಿಷ್ಟ ಪಂಗಡ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಮಹದೇವನಾಯಕ, ಉಪಾಧ್ಯಕ್ಷರಾಗಿ ವೆಂಕಟರಮಣನಾಯಕ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ನಗರದ ಪರಿಶಿಷ್ಟ ಪಂಗಡ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಮಹದೇವನಾಯಕ, ವೆಂಕಟರಮಣನಾಯ್ಕ ಇಬ್ಬರೇ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕ ದಯಾನಂದ್ ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಎಂ.ಮಹದೇವನಾಯಕ ಮಾತನಾಡಿ, ಸಂಘದ ಅಭಿವೃದ್ಧಿ ಬಗ್ಗೆ ಚರ್ಚಿಸಿ, ಮುಂದಿನ ಕ್ರಮವಹಿಸಲಾಗುವುದು. ಸಂಘದ ಸದಸ್ಯತ್ವ ಪಡೆಯಲು ಈಗಾಗಲೇ 1500 ಅರ್ಜಿ ಸಲ್ಲಿಕೆಯಾಗಿದ್ದು, 323 ಮಂದಿ ಸದಸ್ಯತ್ವಕ್ಕೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಉಳಿದ ಅರ್ಜಿಗಳನ್ನು ಪರಿಶೀಲಿಸಿ, ನೋಂದಣಿಗೆ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ, ಅಧಿಕಾರಿಗಳ ಸೂಚನೆಯಂತೆ ಕ್ರಮವಹಿಸಲಾಗುವುದು ಎಂದರು.
ನಿರ್ದೇಶಕರಾದ ರಾಮಣ್ಣ, ನಾಗೇಶ್, ಬಸವರಾಜು, ಸಿ.ಮಹದೇವು, ವೆಂಕಟೇಶನಾಯಕ, ವಿ.ಮಹದೇವನಾಯಕ್, ಬಿಳಿಗಿರಿರಂಗನಾಯಕ, ಲಿಂಗಣ್ಣನಾಯಕ, ಶ್ರೀನಿವಾಸ್, ಜೆ.ಬಿ.ರಾಜು, ರಂಗಸ್ವಾಮಿನಾಯಕ, ವನಜಾಕ್ಷಿ, ರೇಣುಕ, ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಘವೇಂದ್ರ ಹಾಜರಿದ್ದರು.