ನೀರಿನ ತೊಂಬೆ ತೆರವು ಖಂಡಿಸಿ ಪ್ರತಿಭಟನೆ

09rajesh2
Published on

ಚಾಮರಾಜನಗರ : ನಗರದ 26ನೇ ವಾರ್ಡ್‌ನಲ್ಲಿ ನೀರಿನ ತೊಂಬೆಯನ್ನು ನಗರಸಭೆ ಏಕಾಏಕಿ ತೆರವುಗೊಳಿಸಿದೆ ಎಂದು ಆರೋಪಿಸಿ ನಿವಾಸಿಗಳು ಖಾಲಿಬಿಂದಿಗೆ ಹಿಡಿದು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಮುಖಂಡ ಭಾನುಪ್ರಕಾಶ್ ಮಾತನಾಡಿ, ವಾರ್ಡ್‌ನಲ್ಲಿ 15 ದಿನಗಳಿಗೊಮ್ಮೆ ಕುಡಿಯುವ ನೀರು ಬಿಡಲಾಗುತ್ತಿದೆ. ನೀರಿನ ಸಮಸ್ಯೆ ತಲೆದೋರಿದ್ದು, ನಿವಾಸಿಗಳ ತೊಂಬೆಯಲ್ಲಿ ನೀರಿನ ಅನುಕೂಲ ಪಡೆಯುತ್ತಿದ್ದರು. ಆದರೆ ನಗರಸಭೆ ಏಕಾಏಕಿ ಕುಡಿಯುವ ನೀರಿನ ತೊಂಬೆ ತೆರವುಗೊಳಿಸಿರುವುದು ಖಂಡನೀಯ. ಕೂಡಲೇ ತೊಂಬೆಯನ್ನು ಅಲ್ಲೇ ಇಟ್ಟು, ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ನಗರಸಭೆ ಕಚೇರಿ ಮುಂದೆ ನಿವಾಸಿಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ನಿವಾಸಿಗಳಾದ ಜಯಲಕ್ಷ್ಮೀ, ರಾಜಮ್ಮ, ಮರಗತಂ, ಗೋವಿಂದರಾಜು, ರವಿ, ಪರಶಿವಮೂರ್ತಿ, ಮಾಣಿಕ್ಯಂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net