ಮೂರು ತಿಂಗಳಲ್ಲಿ ಹೊಸ ಕಾರ್ಡ್

10rajesh6
Published on

ಚಾಮರಾಜನಗರ:ಮುಂದಿನ ಮೂರು ತಿಂಗಳಲ್ಲಿ 2 ಲಕ್ಷ ಪಡಿತರ ಕಾರ್ಡ್‌ಗಳನ್ನು ವಿಲೇವಾರಿ ಮಾಡಲಿದ್ದೇವೆ ಎಂದು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಆಯೋಜಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೃತಜ್ಞತಾ ಸಭೆ ಅವರು ಮಾತನಾಡಿದರು. ಕ್ಷೇತ್ರದ ಜನತೆ ಸುನೀಲ್‌ಬೋಸ್‌ಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನಾನು ರೈಲ್ವೆ ಸಚಿವನಾಗಿದ್ದಾಗ ಚಾಮರಾಜನಗರ ರೈಲ್ವೆ ಮಾರ್ಗ ವಿಸ್ತರಣೆಗೆ ಕ್ರಮವಹಿಸಿದ್ದೆ. ಈ ಕಾರ್ಯವನ್ನು ನೂತನ ಸಂಸದ ಸುನೀಲ್‌ಬೋಸ್ ಮುಂದುವರಿಸಲಿ ಎಂದು ಸಲಹೆ ನೀಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರಿಗೆ ಒಂದೂ ಮನೆಯನ್ನೂ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ಬಡವರಿಗೆ ಮನೆಗಳನ್ನು ಕೊಡುವ ಕೆಲಸ ಮಾಡಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net