ನಾನು ಈಗ ತಾನೇ ಶಾಲೆಗೆ ಸೇರಿದ್ದೇನೆ

10rajesh5
Published on

ಚಾಮರಾಜನಗರ: ನನ್ನನ್ನು ಈಗ ತಾನೇ ಜನರು ಶಾಲೆಗೆ ಸೇರಿಸಿದ್ದಾರೆ. ಒಂದು ವರ್ಷದ ನಂತರ ನನ್ನ ಕೆಲಸದ ಬಗ್ಗೆ ಮಾತನಾಡಿ ಎಂದು ನೂತನ ಸಂಸದ ಸುನೀಲ್‌ಬೋಸ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ಆಯೋಜಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕೃತಜ್ಞತಾ ಸಭೆ ಅವರು ಮಾತನಾಡಿದರು. ನನಗೆ ಟಿಕೆಟ್ ಸಿಕ್ಕಾಗಿನಿಂದಲೂ ಅಪಪ್ರಚಾರ ತಪ್ಪಿದ್ದಲ್ಲ. ಈಗ ಸಂಸದರು ಒಂದು ತಿಂಗಳಾದರೂ ಕ್ಷೇತ್ರಕ್ಕೆ ಬಂದಿಲ್ಲ ಎಂದು ಅಪಪ್ರಚಾರ ಮಾಡಿದ್ದಾರೆ. ಈಗ ತಾನೇ ಶಾಲೆಗೆ ಸೇರಿದ್ದೇನೆ. ಒಂದು ವರ್ಷದ ನಂತರ ನನ್ನ ಪ್ರಗತಿ ಬಗ್ಗೆ ಮಾತನಾಡಿ. ಮತದಾರರು ಇಟ್ಟಿರುವ ವಿಶ್ವಾಸವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತೇನೆ. ಕ್ಷೇತ್ರಕ್ಕೆ ಹೆಚ್ಚು ಅನುದಾನ ತರುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣೆಯಲ್ಲಿ ನನಗೆ ದಾಖಲೆಯ ಮತ ದೊರಕಲು ಎಲ್ಲರೂ ಸಹಕರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳು ವಿಶೇಷವಾಗಿ ಮಹಿಳೆಯರನ್ನು ತಲುಪಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಮಾಡಿದ ಸಂವಿಧಾನ ಜಾಗೃತಿ ಕಾರ್ಯಕ್ರಮ ಗೆಲುವು ಸಾಧಿಸಲು ಕಾರಣವಾಗಿದೆ. ಕಾಂಗ್ರೆಸ್ ಶಾಸಕರು, ಮುಖಂಡರ ಸಂಘಟನಾತ್ಮಕ ಹೋರಾಟದಿಂದ ಜಯ ಸಿಕ್ಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net