ಸಾರಿಗೆ ಬಸ್ ಡಿಕ್ಕಿ ಹೊಡೆದು ಮಗು ಸಾವು

Thanishka
Published on

ಚಾಮರಾಜನಗರ: ತಾಲೂಕಿನ ಮಾದಾಪುರ ಗ್ರಾಮದ ಬಳಿ ಮಗುವಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಗು ಮೃತಪಟ್ಟಿದೆ.

ತಾಲೂಕಿನ ಭೋಗಾಪುರ ಗ್ರಾಮದ ತಿರುಮಲ್ಲೇಶ್ ಮತ್ತು ಅರ್ಚನಾ ಅವರ ಪುತ್ರಿ ತನಿಷ್ಕಾ (7) ಮೃತೆ. ಮಂಗಳವಾರ ಅಜ್ಜಿ ಮತ್ತು ತಾಯಿಯೊಂದಿಗೆ ಮಗು ತನಿಷ್ಕಾ ಮಾದಾಪುರ ಗ್ರಾಮದ ಬಳಿ ಇರುವ ಖಾಸಗಿ ಶಾಲೆಗೆ ಬಂದಿದ್ದಳು. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲೇ ಇರುವ ಶಾಲೆಯಿಂದ ಏಕಾಏಕಿ ರಸ್ತೆಯ ಕಡೆಗೆ ಮಗು ಬಂದಾಗ ಸಂತೇಮರಹಳ್ಳಿಯಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ಮಗುವಿನ ಸ್ಥಿತಿ ಗಂಭೀರವಾಗಿತ್ತು. ನಗರದ ಜಿಲ್ಲಾ ಆಸ್ಪತ್ರೆಗೆ ಮಗುವನ್ನು ಚಿಕಿತ್ಸೆಗೆ ದಾಖಲಿಸಿ, ವೈದ್ಯರ ಸಲಹೆ ಮೇರೆಗೆ ಮೈಸೂರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮಗು ಮೃತಪಟ್ಟಿತು. ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net