ಜಿಲ್ಲಾಸ್ಪತ್ರೆ ಭ್ರಷ್ಟಾಚಾರ ತಡೆಗೆ ಟಾಸ್ಕ್‌ಫೋರ್ಸ್ ರಚಿಸಿ

Published on

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ ಎಂದು ಆರೋಪಿಸಿರುವ ಜಿಲ್ಲಾ ರೈತ ಸಂಘದ ಮುಖಂಡರು, ಇದನ್ನು ತಡೆಯಲು ಸಾರ್ವಜನಿಕರು ಮತ್ತು ರೈತರನ್ನು ಒಳಗೊಂಡ ಒಂದು ಟಾಸ್ಕ್‌ಫೋರ್ಸ್ ಸಮಿತಿ ರಚನೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನೂತನ ಸಂಸದ ಸುನೀಲ್‌ಬೋಸ್ ಬುಧವಾರ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ವೇಳೆ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಬಡ ರೈತರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮಿತಿಮೀರಿದೆ. ಇದನ್ನು ತಡೆಯಲು ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಬೇಕು. ಗಣಿಬಾಧಿತ ಪ್ರದೇಶಗಳಲ್ಲಿ ಡಿಎಂಎಸ್ ಂಡ್ ಅನ್ನು ಸರಿಯಾಗಿ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬೇಕೆಂದು ಮನವಿ ಮಾಡಿದರು.

ಬೆಳಗಾವಿ ಮೂಲದ ಶ್ರೀ ವಿಶ್ವಗುರು ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಚಾಮರಾಜನಗರ ಶಾಖೆ 150 ರಿಂದ 200 ಜನರ 3 ಕೋಟಿ ರೂ.ಗಳಷ್ಟು ನಷ್ಟ ಮಾಡಿದೆ. ಇದರ ಮ್ಯಾನೇಜರ್ ಮತ್ತು ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ವಹಿಸಬೇಕು. ಎ್ಐಆರ್ ಆಗಿ ಎರಡು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಪಡಿತರ ಹೊಸ ಅರ್ಜಿಗಳನ್ನು ಸ್ವೀಕಾರ ಮಾಡುತ್ತಿಲ್ಲ. ಇದರಿಂದ ರೋಗಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಕಾಡು ಪ್ರಾಣಿಗಳ ಹಾನಿಗೆ 1985ರಲ್ಲಿ ಪರಿಹಾರ ಹಣ ನಿಗದಿ ಮಾಡಿರುವುದನ್ನು ಹೆಚ್ಚಳ ಮಾಡಿ ಮರುನಿಗದಿ ಮಾಡಬೇಕು ಎಂದು ಕೋರಿದರು.

ಬಗರ್ ಹುಕುಂ ಸಾಗುವಳಿ ಶೀಘ್ರ ನೀಡಬೇಕು. ಸಾಗುವಳಿ ಭೂಮಿಯಲ್ಲಿ ಗಣಿಗಾರಿಕೆ ಮತ್ತು ಕ್ರಷರ್ ಮಾಡಲು ಅವಕಾಶ ನೀಡಬಾರದು. ಮೂರು ವರ್ಷಗಳ ಹಿಂದೆ ನೆರೆ ಹಾವಳಿಯಲ್ಲಿ ನಷ್ಟ ಅನುಭವಿಸಿದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇಕ್ವಿಟಸ್ ಸ್ಮಾಲ್ ೈನಾನ್ಸ್ ಚಾಮರಾಜನಗರ ಶಾಖೆ ಸರ್ಕಾರಿ ಉದ್ಯೋಗಿಗಳಿಗೆ ಒಂದು ರೀತಿಯ ಬಡ್ಡಿ, ರೈತರಿಗೆ ಒಂದು ರೀತಿಯ ಬಡ್ಡಿ ವಿಧಿಸುತ್ತಿದೆ. ಚಳವಳಿ ಸಂದರ್ಭದಲ್ಲಿ ರೈತರ ಮೇಲೆ ಹೂಡಿದ ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ರೈತ ಮುಖಂಡರಾದ ಗುರುಪ್ರಸಾದ್, ಮಾಡ್ರಳ್ಳಿ ಮಹದೇವಪ್ಪ, ಕುಂದುಕೆರೆ ಸಂಪತ್ತು, ಮಹೇಶ್, ಮಹದೇವಮೂರ್ತಿ, ಕುಮಾರ್, ಪುಟ್ಟಸ್ವಾಮಿ ಮತ್ತು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net