

ಚಾಮರಾಜನಗರ: ಪ್ರಸಕ್ತ ಸಾಲಿನಡಿ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಗೆ ಸಂಬಂಧಿಸಿದಂತೆ ಮಾವು ತೋಟಗಾರಿಕೆ ಬೆಳೆಯನ್ನು ಸೇರ್ಪಡೆಗೊಳಿಸಲಾಗಿದೆ.
ಸದರಿ ಯೋಜನೆಯಡಿ ಮಾವು ಬೆಳೆಯು ಜಿಲ್ಲೆಯ ಮುಖ್ಯ ಬೆಳೆಯಾಗಿ ಅಧಿಸೂಚನೆಯಾಗಿದ್ದು, ಎಲ್ಲಾ ಹೋಬಳಿಯ ರೈತರು ಮಾವು ಬೆಳೆಗೆ ವಿಮಾ ಸೌಲಭ್ಯ ಪಡೆಯಬಹುದಾಗಿದೆ. ಮಾವು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮೆ ಕೈಗೊಳ್ಳಲು 4 ಸಾವಿರ ರೂ. ವಿಮಾ ಕಂತು ನಿಗದಿಯಾಗಿದ್ದು. ಆಸಕ್ತ ಮಾವು ಬೆಳೆಗಾರರು ತಾಲೂಕು ಮತ್ತು ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ವಿಮಾ ಕಂತು ಪಾವತಿಸಬಹುದಾಗಿದೆ. ವಿಮಾ ಕಂತು ಪಾವತಿಸಲು ಜು.31 ಕೊನೆಯ ದಿನವಾಗಿದೆ.