

ಚಾಮರಾಜನಗರ: ಶೈಕ್ಷಣಿಕ ಬಲವರ್ಧನೆಗಾಗಿ ಶಿಕ್ಷಕರು ಶ್ರಮಿಸುವಂತೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಹನುಮಂತಶೆಟ್ಟಿ ಸಲಹೆ ನೀಡಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲೆ ಹಾಗೂ ತಾಲೂಕು ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಬಲವರ್ಧನೆಗಾಗಿ ಶಿಕ್ಷಕರು ಹೆಚ್ಚು ಶ್ರಮವಹಿಸಬೇಕು. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಬೇಕು. ಸರ್ಕಾರದ ಆಶಯಕ್ಕೆ ತಕ್ಕಂತೆ ಮಕ್ಕಳ ಕಲಿಕೆ, ಪರಿಣಾಮ ಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಕಚೇರಿಯಲ್ಲಿ ಶಿಕ್ಷಕರ ಕೆಲಸ ಕಾರ್ಯಗಳು ಬಾಕಿ ಇಲ್ಲದಂತೆ ಆಡಳಿತ ನಿರ್ವಹಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ, ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಎನ್.ಸುಧಾ, ಪದಾಧಿಕಾರಿಗಳಾದ ಎಂ.ಡಿ.ಮಹದೇವಯ್ಯ, ಬಿ.ಕೃಷ್ಣಮೂರ್ತಿ, ಸವಿತಾರಣಿ, ಮಹದೇವಸ್ವಾಮಿ, ಸಿ.ಎಂ.ಮುರುಗೇಶ್ ಕುಮಾರ್, ಎಸ್.ಜಿ.ರಾಜು, ಭವಾನಿದೇವಿ, ಶ್ವೇತ, ಸಿ.ಮಲ್ಲಿಕಾರ್ಜುನ, ನಟರಾಜು, ಸಮೀವುಲ್ಲಾ, ಎಸ್.ಬಿ.ರಾಜು, ಸಿದ್ದರಾಜು, ನಂಜುಂಡಸ್ವಾಮಿ ಹಾಜರಿದ್ದರು.