ಒಂದು ಎಕರೆ ಪ್ರದೇಶದಲ್ಲಿನ ಕಬ್ಬು ನಾಶ

04 HANUR 8
Published on

ಹನೂರು: ಪಟ್ಟಣ ಸಮೀಪದ ಲೊಕ್ಕನಹಳ್ಳಿಗೆ ತೆರಳುವ ರಸ್ತೆ ಬದಿಯ ಜಮೀನೊಂದರಲ್ಲಿ ಗುರುವಾರ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು 1 ಎಕರೆ ಕಬ್ಬು ನಾಶವಾಗಿದೆ.

ಪಟ್ಟಣದ ಪ್ರವೀಣ್ ನಾಯ್ಡು ಅವರು 2 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದು, ಸುಮಾರು 10 ಟನ್ ಕಬ್ಬನ್ನು ಕಟಾವು ಮಾಡಿದ್ದರು. ಆದರೆ ಮಧ್ಯಾಹ್ನ ಸುಮಾರು 1ಗಂಟೆ ವೇಳೆಯಲ್ಲಿ ಜಮೀನಿನಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿಯಲ್ಲಿ ಬೆಂಕಿ ಕಾಣಿಸಿಕೊಂಡು ಕಬ್ಬಿನ ಫಸಲಿಗೆ ತಗುಲಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಪ್ರವೀಣ್ ನಾಯ್ಡು ಅವರಿಗೆ ಮಾಹಿತಿ ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕಾಗಮಿಸಿದ ಪ್ರವೀಣ್, ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸುವ ಮೂಲಕ ಮುಂದಾಗುವ ಅನಾಹುತವನ್ನು ತಪ್ಪಿಸಿದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್ ನಾಯಕ್, ಸಿಬ್ಬಂದಿ ಜಯಶಂಕರ್, ಹರ್ಷ ಹಾಗೂ ಮನೋಹರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net