ದಲಿತ ಮುಖಂಡರಿಂದ ನೂತನ ಎಸ್ಪಿಗೆ ಸನ್ಮಾನ

04rajesh4
Published on

ಚಾಮರಾಜನಗರ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಅವರನ್ನು ದಲಿತ ಮುಖಂಡರು ಗುರುವಾರ ಸನ್ಮಾನಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್ಪಿ ಡಾ.ಬಿ.ಟಿ.ಕವಿತಾ ವರನ್ನು ಮುಖಂಡರು ಭೇಟಿ ಮಾಡಿ ಶಾಲು ಹೊದಿಸಿ, ಹಾರಹಾಕಿ, ತಾಂಬೂಲ ನೀಡಿ ಸನ್ಮಾನಿಸಿದರು. ದಲಿತ ಮುಖಂಡರಾದ ಬಸವನಪುರ ರಾಜಶೇಖರ, ಎಂ.ಶಿವಮೂರ್ತಿ, ಬಿ.ಚಾಮರಾಜು, ಕೆಸ್ತೂರು ಮರಪ್ಪ, ಹಸಗೂಲಿ ಸಿದ್ಧಯ್ಯ, ಸಿ.ಎಚ್.ರಂಗಸ್ವಾಮಿ, ಅಂಕಹಳ್ಳಿ ಸಿದ್ದಯ್ಯ, ಪುಟ್ಟಲಿಂಗಯ್ಯ, ಲೋಕೇಶ್, ಹನೂರು ಗುರುಸ್ವಾಮಿ, ಗುರುಲಿಂಗಯ್ಯ, ನಾಗೇಶ್, ರಾಜು, ಮಳವಳ್ಳಿ ಮಹದೇವಯ್ಯ, ವೆಂಕಟಮಾಧು, ಶಿವಣ್ಣ, ಕಾಮಗೆರೆ ಮಹದೇವ, ಭೈರನತ್ತ ಮಾದೇಶ್, ಕುಮಾರ್, ರಾಚಪ್ಪ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net