

ಚಾಮರಾಜನಗರ: ತಾಲೂಕು ಕುರುಬರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಎರಡನೇ ಬಾರಿಗೆ ಸಂಘದ ಅಧ್ಯಕ್ಷರಾಗಿ ಎಸ್‌ಪಿಕೆ ಉಮೇಶ್ ಅವಿರೋಧವಾಗಿ ಆಯ್ಕೆಯಾದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂಘದ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಧ್ಯಕ್ಷ ಹಾಗೂ ಪ್ರಮುಖ ಪಧಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಚುನಾವಣಾಧಿಕಾರಿಯಾಗಿದ್ದ ಕೆ.ಎಂ. ತ್ಯಾಗರಾಜ್ ಪ್ರಸಾದ್ ಅವರು ಪದಾಧಿಕಾರಿಗಳ ಚುನಾವಣೆ ನಡೆಸಿ, ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಸಭೆಯಲ್ಲಿ ಸಂಘದ 29 ನಿರ್ದೇಶಕರು ಭಾಗವಹಿಸಿ, ಸಹಮತ ವ್ಯಕ್ತಪಡಿಸಿದರು.
ಸಂಘದ ನೂತನ ಪದಾಧಿಕಾರಿಗಳ ವಿವರ : ಅಧ್ಯಕ್ಷರಾಗಿ ಎಸ್‌ಪಿಕೆ ಉಮೇಶ್, ಗೌರವ ಅಧ್ಯಕ್ಷರಾಗಿ ಹಳೇಪುರ ಬೆಳ್ಳೇಗೌಡ, ಉಪಾಧ್ಯಕ್ಷರಾಗಿ ಜಿ. ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಕೆ,ಪಿ. ನಾಗರಾಜು, ಸಹಕಾರ್ಯದರ್ಶಿಯಾಗಿ ಮಹದೇವಸ್ವಾಮಿ, ಖಜಾಂಚಿಯಾಗಿ ರಾಮಸಮುದ್ರದ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಗೋವಿಂದ, ಪ್ರಭು, ಕೆ. ಪುನೀತ್‌ಕುಮಾರ್, ಡಿ. ಮಂಜು, ಚನ್ನೇಗೌಡ, ರಾಜೇಶ್ ಅವಿರೋಧವಾಗಿ ಆಯ್ಕೆಯಾದರು.