

ಚಾಮರಾಜನಗರ: ಕರ್ನಾಟಕ ಸರ್ಕಾರ ಸಹಕಾರ ಸಂಘಗಳ ನೋಂದಾಯಿತ ಕಾಯ್ದೆ-1960ರ ಪ್ರಕಾರ ನೋಂದಾಯಿತ ಸಂಸ್ಥೆಯಾಗಿರುವ ಚಾಮರಾಜನಗರ ನಿರ್ಮಿತಿ ಕೇಂದ್ರದಲ್ಲಿ ಖಾಲಿ ಇರುವ ಯೋಜನಾ ವ್ಯವಸ್ಥಾಪಕರ (ಪ್ರಾಜೆಕ್ಟ್ ಮ್ಯಾನೇಜರ್) ಒಂದು ಹುದ್ದೆಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಯು.ಜಿ.ಸಿ ಅಥವಾ ಎ.ಐ.ಸಿ.ಟಿ.ಇ ಇಂದ ಮಾನ್ಯತೆ ಪಡೆದ ಎಂ.ಟೆಕ್ ಪದವಿ ತೇರ್ಗಡೆಯಾಗಿರಬೇಕು. (ರೆಗ್ಯೂಲರ್ ಮೋಡ್‌ನಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.) ಅಭ್ಯರ್ಥಿಯ ವಯೋಮಿತಿ ಕನಿಷ್ಠ 33 ವರ್ಷ. ಗರಿಷ್ಠ 38 ವರ್ಷ. ಸರ್ಕಾರಿ, ಅರೆ ಸರ್ಕಾರಿ, ಸ್ವಾಮ್ಯದ ಇತರೆ ಸಂಸ್ಥೆಗಳು, ನಿಗಮ, ಮಂಡಳಿಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕನಿಷ್ಠ 10ವರ್ಷಗಳ ಅನುಭವ ಹೊಂದಿರಬೇಕು. (ನಿರ್ಮಿತಿ ಕೇಂದ್ರದಲ್ಲಿ ಸೇವಾ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಪೂರ್ವಾನುಮತಿ ಹಾಗೂ ಸೇವಾ ಅನುಭವ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.) ಅರ್ಹ ವಿದ್ಯಾರ್ಹತೆ ಮತ್ತು ಸೇವಾ ಅನುಭವವುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಜುಲೈ 25ರೊಳಗೆ (ಸಂಜೆ 5 ಗಂಟೆಯ ಒಳಗೆ) ಇ-ಮೇಲ್ ಮೂಲಕ ಮಾತ್ರ ಸ್ವಯಂ ದೃಢೀಕೃತ ದಾಖಲಾತಿಯೊಂದಿಗೆ ಕಳುಹಿಸಬೇಕು. ಅರ್ಜಿಗಳನ್ನು ಮುದ್ದಾಂ, ಅಂಚೆ ಅಥವಾ ಕೋರಿಯರ್ ಮೂಲಕ ಸಲ್ಲಿಸುವಂತಿಲ್ಲ.
ಹೆಚ್ಚಿನ ವಿವರಗಳನ್ನು ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿ ಸಂಖ್ಯೆ 104ರಲ್ಲಿನ ಅಭಿವೃದ್ಧಿ ಶಿರಸ್ತೇದಾರ್ ಅವರನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು ಅಥವಾ ದೂ.ಸಂ 08226-223160 ಅನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹಾಗೂ ಚಾಮರಾಜನಗರ ನಿರ್ಮಿತಿ ಕೇಂದ್ರದ ಅಧ್ಯಕ್ಷರಾದ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.