

ಚಾಮರಾಜನಗರ: ನಗರದಲ್ಲಿರುವ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಭೇಟಿ ನೀಡಿ ಕುಂದು-ಕೊರತೆ ಪರಿಶೀಲನೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಸಮೀಪದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾಥಿ ನಿಲಯ, ಕರಿನಂಜನಪುರದಲ್ಲಿರುವ ಸಾರ್ವಜನಿಕ ಮಾದರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು.
ಕಂಪ್ಯೂಟರ್ ಕೊಠಡಿ, ಪೀಠೋಪಕರಣಗಳು, ಅಡುಗೆ ಕೊಠಡಿ, ಮಲಗುವ ಕೋಣೆ, ದಿನಸಿ ಉಗ್ರಾಣದ ಕೊಠಡಿ, ಊಟದ ಹಾಲ್, ಬೋಧನಾ ಸಭಾಂಗಣ, ಹಾಸ್ಟೆಲ್ ನಿರ್ವಹಣೆಯ ಬಗ್ಗೆ ಪರಿಶೀಲಿಸಿದರು. ವಿದ್ಯಾರ್ಥಿಗಳ ಬಳಿ ತೆರಳಿ ಹಾಸ್ಟೆಲ್‌ಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವ ಕುರಿತಂತೆ ಮಾಹಿತಿ ಪಡೆದರು. ವಿಸ್ತರಣಾಧಿಕಾರಿ ನಿಂಗರಾಜು, ಎಪಿಎಂಸಿ ಸದಸ್ಯ ಎ.ಎಸ್.ಪ್ರದೀಪ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ರವಿಗೌಡ ಹಾಜರಿದ್ದರು.