ಪುಸ್ತಕ ಕದಿಯದ ಕಳ್ಳರು

03rajesh8
Published on

ಚಾಮರಾಜನಗರ : ನಗರದಲ್ಲಿ ಎರಡ್ಮೂರು ದಿನಗಳಿಂದ ಕಳ್ಳತನ ನಡೆಯುತ್ತಿದ್ದು, ಮಂಗಳವಾರ ರಾತ್ರಿ ಕಳ್ಳರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಮತ್ತು ಸಿರಿಗನ್ನಡ ಪುಸ್ತಕ ಮಳಿಗೆಯ ಬೀಗ ಮುರಿದಿದ್ದಾರೆ.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಪಕ್ಕ ಇರುವ ಕಸಾಪ ಕಚೇರಿಯ ಬೀಗ ಮುರಿದು ಚಿಲಕ ತೆಗೆದಿದ್ದಾರೆ. ಇಲ್ಲೇ ಪಕ್ಕದಲ್ಲೇ ಇರುವ ಸಿರಿಗನ್ನಡ ಪುಸ್ತಕ ಮಳಿಗೆಯ ಬೀಗ ಮುರಿದಿದ್ದಾರೆ. ಪುಸ್ತಕಗಳೇ ತುಂಬಿರುವ ಈ ಎರಡೂ ಜಾಗದಲ್ಲಿ ಕಳ್ಳರಿಗೆ ಹಣ ಸಿಕ್ಕಿಲ್ಲ. ಕಳ್ಳರು ಪುಸ್ತಕವನ್ನೂ ಕದ್ದಿಲ್ಲ. ಅಂಗಡಿಯಲ್ಲಿ ಕಳ್ಳತನಕ್ಕೆ ಪ್ರಯತ್ನ ನಡೆದಿರುವ ಹಿನ್ನೆಲೆಯಲ್ಲಿ ಗೋವಿಂದರಾಜು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net