ನೂತನ ಎಸ್ಪಿ ಅಧಿಕಾರ ಸ್ವೀಕಾರ

03rajesh7a
Published on

ಚಾಮರಾಜನಗರ: ಚಾಮರಾಜನಗರದ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಬುಧವಾರ ಅಧಿಕಾರ ಸ್ವೀಕಾರ ಮಾಡಿದರು.

ರಾಜ್ಯ ಸರ್ಕಾರ ಈ ಹಿಂದೆ ಇದ್ದ ಎಸ್ಪಿ ಪದ್ಮಿನಿ ಸಾಹು ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಈ ಸ್ಥಾನಕ್ಕೆ ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್ಪಿಯಾಗಿದ್ದ ಡಾ.ಬಿ.ಟಿ.ಕವಿತಾ ಅವರನ್ನು ನಿಯೋಜನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬುಧವಾರ ನಗರದ ಎಸ್ಪಿ ಕಚೇರಿಗೆ ಆಗಮಿಸಿದ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕಾರ ಮಾಡಿದರು.

ಪತಿ ಮತ್ತು ಪತ್ನಿ ಸೇವೆ: ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಪತ್ನಿ ಮತ್ತು ಪತ್ನಿ ಇಬ್ಬರಿಗೂ ಒಂದೇ ಜಿಲ್ಲೆಯಲ್ಲಿ ಸೇವೆ ಮಾಡುವ ಭಾಗ್ಯ ಲಭಿಸಿದೆ. ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮತ್ತು ಅಬಕಾರಿ ಇಲಾಖೆ ಉಪ ಆಯುಕ್ತ ನಾಗಶಯನಗೆ ಈ ಅವಕಾಶ ಒದಗಿಬಂದಿದೆ. ಇದೇ ವೇಳೆ ನಾಗಶಯನ ಅವರು ಪತ್ನಿ ಎಸ್‌ಪಿ ಆಗಿ ಅಧಿಕಾರ ಸ್ವೀಕರಿಸಿದ ಡಾ.ಬಿ.ಟಿ.ಕವಿತಾ ಅವರನ್ನು ಸ್ವಾಗತಿಸಿದ್ದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net