

ಚಾಮರಾಜನಗರ: ಅರಣ್ಯ ಪ್ರದೇಶದ ಹಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವುದರಿಂದ ಆನೆಗಳು ನಾಡಿಗೆ ಲಗ್ಗೆ ಹಾಕುವುದು ಕಡಿಮೆಯಾಗುತ್ತಿದೆ ಎಂದು ಚಾಮರಾನಗರ ಅರಣ್ಯ ಇಲಾಖೆ ವೃತ್ತದ ಸಿಸಿಎ್ ಹೀರಾಲಾಲ್ ತಿಳಿಸಿದ್ದಾರೆ.
ಕಾಡಾನೆ ಹಾವಳಿ ನಿಯಂತ್ರಣದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಆನೆಗಳು ರೈತರ ಜಮೀನಿಗೆ ಬಂದು ಬೆಳೆ ನಾಶ ಮಾಡುವುದು ಹಾಗೂ ಮಾನವ-ಪ್ರಾಣಿ ಸಂಘರ್ಷ ಉಂಟಾಗುವುದು ಕಡಿಮೆಯಾಗುತ್ತದೆ. ಆದರೆ ಎಲ್ಲ ಕಡೆಗಳಲ್ಲೂ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಸಾಧ್ಯವಿಲ್ಲ. ಒಂದು ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕಾದರೆ 1.75 ಕೋಟಿ ರೂ. ವೆಚ್ಚವಾಗುತ್ತದೆ. ಈ ಕಾರಣಕ್ಕೆ ಕೆಲವು ಕಡೆಗಳಲ್ಲಿ ಸೋಲಾರ್ ಬೇಲಿಗಳನ್ನು ಅಳವಡಿಸಲಾಗುತ್ತಿದೆ. ನಮ್ಮ ವ್ಯಾಪ್ತಿಯಲ್ಲಿ ಆನೆ ಹಾವಳಿಯನ್ನು ತಡೆಗಟ್ಟಲು ನಿರಂತರವಾಗಿ ಕ್ರಮವಹಿಸಲಾಗುತ್ತಿದೆ ಎಂದಿದ್ದಾರೆ.