ವಿಮಾ ಕಂತು ಪಾವತಿಸಲು ಮನವಿ

PASAL BHEEMA
Published on

ಚಾಮರಾಜನಗರ: ಮುಂಗಾರು ಹಂಗಾಮಿಗೆ (2023-24ನೇ ಸಾಲಿಗೆ)ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿಯಲ್ಲಿ ರೈತರು ವಿಮಾ ಕಂತು ಪಾವತಿಸಿ ವಿಮೆಗೆ ನೋಂದಾಯಿಸಿಕೊಳ್ಳಲು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಲೂಕಿನ ಕಸಬಾ, ಚಂದಕವಾಡಿ, ಹರದನಹಳ್ಳಿ, ಹರವೆ ಹಾಗೂ ಸಂತೇಮರಹಳ್ಳಿ ಹೋಬಳಿಯ ನೀರಾವರಿ ಪ್ರದೇಶದ ಬೆಳೆಗಳಾದ ಮುಸುಕಿನ ಜೋಳ, ಟೊಮ್ಯಾಟೊ, ಭತ್ತ, ರಾಗಿ, ಅರಿಶಿಣ ಬೆಳೆಗಳಿಗೆ ಜು.15 ಮತ್ತು ಮಳೆಯಾಶ್ರಿತ ಬೆಳೆಯಾದ ನೆಲಗಡಲೆ, ರಾಗಿ, ತೊಗರಿ ಬೆಳೆಗಳಿಗೆ ವಿಮಾ ಕಂತು ಪಾವತಿಸಲು ಜು.31 ಕೊನೆಯ ದಿನವಾಗಿದೆ. ರೈತರು ವಿಮಾ ಕಂತು ಪಾವತಿಸಿ ವಿಮೆಗೆ ನೋಂದಾಯಿಸಿಕೊಳ್ಳಲು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net