ಜೀವಭಯದಲ್ಲಿ ಜೀವನ

Raju
Published on

ಚಾಮರಾಜನಗರ: ನಮ್ಮ ಜಮೀನಿಗೆ ಕಾಡಾನೆಯೊಂದು ಲಗ್ಗೆ ಇಟ್ಟು ಫಸಲು ಹಾಗೂ ಅಲಸಿನ ಮರವನ್ನು ನಾಶ ಪಡಿಸಿದೆ ಎಂದು ಮಹದೇಶ್ವರ ಬೆಟ್ಟದ ಆಣೆಹೊಲ ಗ್ರಾಮದ ರಾಜು ಹೇಳಿದ್ದಾರೆ.

ಕಾಡಾನೆ ಹಾವಳಿ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ಅವರು, ಇದರಿಂದ ನಷ್ಟವಾಗಿದೆ. ಜತೆಗೆ ಆಗಾಗ್ಗೆ ರಾತ್ರಿ ವೇಳೆ ಲಗ್ಗೆ ಇಡುತ್ತಿರುವ ಕಾಡಾನೆಯಿಂದ ಜೀವಭಯ ಕಾಡುತ್ತಿದೆ. ಇತ್ತ ಹಂದಿ ಹಾಗೂ ಕರಡಿ ಹಾವಳಿ ಹೆಚ್ಚಾಗಿದೆ. ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net