

ಚಾಮರಾಜನಗರ: ಇಂದಿಗೂ ರಾತ್ರಿ ವೇಳೆ, ಈ ಭಾಗದ ಜಮೀನುಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಲೇ ಇವೆ ಎಂದು ಹನೂರು ತಾಲೂಕಿನ ಹೂಗ್ಯಂನ ಅಂಗುಮುತ್ತು ಹೇಳಿದರು.
ಕಾಡಾನೆ ಹಾವಳಿ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ಅವರು, ಇದರಿಂದ ವ್ಯವಸಾಯ ಮಾಡಬೇಕೆಂದರೆ ಕಾಡಾನೆಗಳದ್ದೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ನಷ್ಟ ಅನುಭವಿಸುವಂತಾಗಿದೆ. ಜತೆಗೆ ಜೀವ ಭಯದಲ್ಲಿ ಜೀವನ ನಡೆಸಬೇಕಿದೆ. ಆದ್ದರಿಂದ ಸಂಬಂಧಪಟ್ಟ ಗಮನಹರಿಸಿ ಆನೆಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದಿದ್ದಾರೆ.