ಸಂಕಷ್ಟದಲ್ಲಿ ರೈತರು

Mahadevappa
Published on

ಚಾಮರಾಜನಗರ: ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕಾಡಂಚಿನ ಗ್ರಾಮಗಳ ರೈತರಿಗೆ ತುಂಬ ತೊಂದರೆಯಾಗುತ್ತಿದೆ ಎಂದು ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿ ಮಹದೇವಪ್ಪ ದೂರಿದ್ದಾರೆ.

ಕಾಡಾನೆ ಹಾವಳಿ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ಅವರು, ಕುಂದಕೆರೆ, ಗೋಪಾಲಸ್ವಾಮಿಬೆಟ್ಟ, ಮದ್ದೂರು ಹಾಗೂ ಓಂಕಾರ ವಲಯಗಳ ಕಾಡಂಚಿನ ಜಮೀನುಗಳಲ್ಲಿ ರೈತರು ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಅದಲ್ಲದೇ ಬೆಳೆ ನಷ್ಟ ಎಂದು ಅರಣ್ಯ ಇಲಾಖೆ ನೀಡುವ ಪುಡಿಗಾಸಿನ ಪರಿಹಾರ ಪಡೆಯಲು ಪರದಾಡುತ್ತಿದ್ದಾರೆ. ಇದರಿಂದಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net