ನೀರು ಅರಸಿ ನಾಡಿಗೆ

Madhu
Published on

ಚಾಮರಾಜನಗರ: ಮುಖ್ಯವಾಗಿ ನಮ್ಮ ಗ್ರಾಮಗಳು ಸಾಮಾಜಿಕ ಅರಣ್ಯ ಪ್ರದೇಶವಾಗಿರುವುದರಿಂದ ಇದು ಬಂಡೀಪುರಕ್ಕೂ ಸೇರಿಲ್ಲ, ಇತ್ತ ಬಿಳಿಗಿರಿನಬೆಟ್ಟ ಅರಣ್ಯ ಪ್ರದೇಶಕ್ಕೂ ಸೇರಿಲ್ಲ ಎಂದು ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಗ್ರಾಮದ ಮಧು ಹೇಳಿದ್ದಾರೆ.

ಕಾಡಾನೆ ಹಾವಳಿ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ಅವರು, ಕಾಡಂಚಿನಲ್ಲಿ ಟ್ರಂಚ್ ಹೊಡೆಯದೆ ರೈಲು ಕಂಬಿಗಳನ್ನು ಅಳವಡಿಸದೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಕಾಡಾನೆಗಳು ತೋಟ ಮತ್ತು ಜಮೀನುಗಳಿಗೆ ನುಗ್ಗಿ ತೆಂಗು, ಬಾಳೆ, ಹಲಸು, ಅಡಕೆ ಇನ್ನಿತರ ಬೆಳೆಗಳನ್ನು ಹಾನಿ ಮಾಡಿದೆ. ಅರಣ್ಯ ಇಲಾಖೆಯವರು ಕೆರೆ, ಚೆಕ್‌ಡ್ಯಾಂ ಹಾಗೂ ಇನ್ನಿತರ ಸೌಕರ್ಯ ಕಲ್ಪಿಸಿದರೆ ಸಮಸ್ಯೆ ಸಾಧ್ಯವಾದಷ್ಟು ಕಡಿಮೆಯಾಗಬಹುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net