ಚಾಮರಾಜನಗರ: ವಿಭಾಗೀಯ ಮಟ್ಟದ ರೈತರ ತಾಂತ್ರಿಕ ಮತ್ತು ಅಧ್ಯಯನ ಶಿಬಿರ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ಜು.3 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ತಿಳಿಸಿದರು.
ನಗರದ ಸತ್ತಿ ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ತೇಜಸ್ವಿಪಟೇಲ್ ಅಧ್ಯಕ್ಷತೆ ವಹಿಸುವರು. ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಆಶೋಕ್ ಸಂಗಪ್ಪ, ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಸಂಸ್ಥೆ ನಿರ್ದೇಶಕ ಖಂಡಗಾವಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ.ನಾಗರಾಜ್ ಹಾಗೂ ಹಿರಿಯ ವಿಜ್ಞಾನಿ ಸಿದ್ದಪ್ಪ ವಿಷಯ ಮಂಡನೆ ಮಾಡುವರು ಎಂದು ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉಮ್ಮತ್ತೂರಿನ ಆಕೃತಿ ಎಕೋ ್ರೆಂಡ್ಲಿ ಎಂಟರ್ ಪ್ರೈಸಸ್ ಮಾಲೀಕರಾದ ವರ್ಷ ಕಚೇರಿ ನಾಮಲಕ ಉದ್ಘಾಟಿಸುವರು. ಇದೇವೇಳೆ ಪ್ರಗತಿಪರ ರೈತ ಮುದ್ದಹಳ್ಳಿ ಚಿಕ್ಕಸ್ವಾಮಿ ಅವರಿಗೆ ಗೌರವ ಸಮರ್ಪಣೆ ನೆರವೇರಿಸಲಾಗುವುದು. ರೈತ ಮುಖಂಡರಾದ ವಿಠಲ ಬಿ.ಗಣಾಚಾರಿ, ಆಲತ್ತೂರು ಸಿದ್ದಲಿಂಗಪ್ಪ, ಹಾಲಿನ ನಾಗರಾಜು, ಪತ್ರಕರ್ತರ ರಾಜೇಶ್ ಮುಖಗು ಅತಿಥಿಗಳಾಗಿ ಭಾಗವಹಿಸುವರು ಎಂದರು.
ಕೇಂದ್ರ ಸರ್ಕಾರ ಕಬ್ಬಿನ ಇಳುವರಿಯನ್ನು ಕರ್ಖಾನೆಗಳಿಗೆ ಶೇ.8.5 ರಷ್ಟು ಇಳಿಕೆ ಮಾಡಬೇಕು. ಎಂಎಸ್‌ಪಿ ಬೆಲೆ ಎಲ್ಲಾ ಬೆಳೆಗಳಿಗೂ ಖಾತರಿಯಾಗಬೇಕು. ಸೋಲಾರ್ ಯೋಜನೆಯಡಿ ಶೇ. 90 ರಷ್ಟು ಹಣವನ್ನು ರೈತರು ಖಾತೆಗೆ ಜಮೆ ಮಾಡಬೇಕು. ಕೇಂದ್ರ ಸರ್ಕಾರ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಮೇಕೆದಾಟು ಯೋಜನೆಯನ್ನು ಜಾರಿ ಮಾಡಬೇಕು. ಎಲ್ಲಾ ಬೆಳೆಗಳಿಗೂ ಖರೀದಿ ಕೇಂದ್ರವನ್ನು ತೆಗೆಯಬೇಕು. ಬೆಳೆ ವಿಮೆ ನಿಯಮಗಳನ್ನು ಬದಲಾವಣೆ ಮಾಡಬೇಕು. ಕಾಡುಪ್ರಾಣಿಗಳ ಹಾವಳಿಯಿಂದ ನಾಶವಾದ ಬೆಳೆಗಳಿಗೆ ವೈಜ್ಞಾನಿಕ ಬೆಳೆ ನಷ್ಟವನ್ನು ನೀಡಬೇಕು ಹಾಗೂ ಇನ್ನಿತರೆ ಹಕ್ಕೋತ್ತಾಯಗಳನ್ನು ರಾಜ್ಯದ ನೂತನ ಸಂಸದರಿಗೆ ಸಲ್ಲಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಕಾರ್ಯದರ್ಶಿ, ಮಲೆಯೂರು ಮಹೇಂದ್ರ, ಮೈಸೂರು ಜಿಲ್ಲಾಧ್ಯಕ್ಷ ಆಡ್ಯರವಿ, ತಾಲೂಕು ಅಧ್ಯಕ್ಷ ಅರಳೀಕಟ್ಟೆ ಕುಮಾರ್, ಮೋಹನ್, ಮೂಡ್ನಾಕೂಡು ಸೋಮೇಶ್ ಹಾಜರಿದ್ದರು.