

ಚಾಮರಾಜನಗರ: ನಗರದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಭಗೀರಥ ಪ್ರೀಮಿಯರ್ ಲೀಗ್-ಐಪಿಎಲ್ ಸೀಸನ್ -2 ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲ್‌ಎಸ್‌ಜಿ ತಂಡ ಪ್ರಥಮ ಬಹುಮಾನಕ್ಕೆ ಭಾಜನವಾದರೆ, ಮುಂಬೈ ಇಂಡಿಯನ್ ತಂಡ ದ್ವಿತೀಯ ಬಹುಮಾನ ಪಡೆಯಿತು. ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಬಹುಮಾನ ವಿತರಣೆ ಮಾಡಿದರು.