ಮುಂದಿನ ವರ್ಷದಿಂದ ವಿವಿಯಲ್ಲೇ ಕ್ರೀಡಾಕೂಟ ಆಯೋಜನೆ

25rajesh4
Published on

ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಚಾಮರಾಜನಗರ ವಿಶ್ವವಿದ್ಯಾಲಯ ಸುವರ್ಣ ಗಂಗೋತ್ರಿಯ ಸುವರ್ಣ ಸಂಭ್ರಮ -2024ರ ಕ್ರೀಡಾ ಚಟುವಟಿಕೆಗಳ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ವಿವಿ ವಿದ್ಯಾರ್ಥಿಗಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವ ಉದ್ದೇಶದಿಂದ ಶೀಘ್ರ ವಿವಿ ಆವರಣದಲ್ಲಿ ಕ್ರೀಡಾ ಮೈದಾನ ನಿರ್ಮಾಣ ಸಂಬಂಧ ಕಾರ್ಯಪಾಲಕ ಇಂಜಿನಿಯರ್‌ರೊಂದಿಗೆ ಚರ್ಚಿಸಲಾಗಿದೆ. ಜತೆಗೆ ಕ್ರಿಯಾಯೋಜನೆಯ ಸಿದ್ಧತೆಯೂ ನಡೆಯುತ್ತಿದೆ. ಕ್ರೀಡೆಗಳನ್ನು ಉತ್ತೇಜಿಸಲು ಮುಂದಿನ ವರ್ಷದಿಂದ ವಿವಿಯಲ್ಲೇ ವಿವಿಧ ಕ್ರೀಡಾಕೂಟ ನಡೆಸಲಾಗುತ್ತದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಕ್ರೀಡಾ ಸಂಯೋಜಕ ಡಾ.ಶಾಂತರಾಜು, ಕ್ರೀಡಾ ಸಂಯೋಜಕ ಡಾ.ಮಹೇಶ್ ಕೋಡಿಉಗನೆ, ಡಾ.ಲಿಂಗರಾಜ, ಚೇತನ್, ಸಚಿನ್, ಮಹೇಶ್, ಮಹದೇವಮೂರ್ತಿ, ಉಪನ್ಯಾಸಕರಾದ ದಿವ್ಯಾ, ಸುಷ್ಮಾ, ನಂದಿನಿ, ಕುಮಾರ್ ಚಿಕ್ಕಹೊಳೆ, ಬಸವಣ್ಣ, ದೈಹಿಕ ಮನೋಜ್, ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net