

ಚಾಮರಾಜನಗರ: ಚಾಮರಾಜನಗರ ವಿಶ್ವವಿದ್ಯಾಲಯ ಪ್ರತ್ಯೇಕವಾದ ನಂತರ ಮೊದಲ ಬಾರಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು, ಎಲ್ಲ ವಿದ್ಯಾರ್ಥಿಗಳನ್ನು ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಭಿನಂದಿಸಿದ್ದಾರೆ.
ವಿವಿ ಮೊದಲ ಬಾರಿಗೆ 2023-24ನೇ ಸಾಲಿನ ಮೊದಲ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳ ವಿವಿಧ ಪದವಿಗಳ ಫಲಿತಾಂಶ ಪ್ರಕಟಿಸಿದೆ. ಕಳೆದ ಜನವರಿ-ಫೆಬ್ರವರಿ ಮತ್ತು ಏಪ್ರಿಲ್-ಮಾರ್ಚ್‌ನಲ್ಲಿ ನಡೆದ ಎಂ.ಎ ವಿಭಾಗದ ಕನ್ನಡ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಜಾನಪದ ಹಾಗೂ ಎಂ.ಎಸ್ಸಿ ವಿಭಾಗದ ಭೌತಶಾಸ್ತ್ರ, ರಸಾಯನಶಾಸ್ತ್ರ, ವಾಣಿಜ್ಯ, ಸಮಾಜ ಸೇವಾ ಕಾರ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಎಂ.ಬಿ.ಎಗೆ ಪರೀಕ್ಷೆ ನಡೆದಿತ್ತು. ಸ್ನಾತಕ ಪದವಿಗಳಲ್ಲಿ ಒಟ್ಟು 2400 ಮತ್ತು ಸ್ನಾತಕೋತ್ತರ ಪದವಿಗಳಲ್ಲಿ 360 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಖಿಖಿಇಖ ಪೋರ್ಟಲ್‌ನಲ್ಲಿ ನೋಡಿಕೊಳ್ಳಬಹುದಾಗಿದೆ ಎಂದು ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.