

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ಗೆ ಗೋ ಬ್ಯಾಕ್ ಹೇಳುವುದಾಗಿ ತಿಳಿಸಿದ್ದ ರೈತ ಮುಖಂಡರನ್ನು ಪೊಲೀಸರು ಸೋಮವಾರ ಬಂಧಿಸಿ ಬಿಡುಗಡೆ ಮಾಡಿದರು.
ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ರೈತ ಮುಖಂಡರು ಭೂ ಕಬಳಿಕೆ ವಿರುದ್ಧ ಕಿಡಿಕಾರಿದ್ದರು. ಸಚಿವರು ಜಿಲ್ಲೆಗೆ ಬಂದಾಗ ಪ್ರತಿಭಟನೆ ನಡೆಸಿ ಗೋ ಬ್ಯಾಕ್ ಹೇಳುವುದಾಗಿ ತಿಳಿಸಿದ್ದರು. ಈ ವಿಷಯ ತಿಳಿದು ಎಚ್ಚೆತ್ತ ಪೊಲೀಸರು ಮುಂಜಾನೆಯೇ ರೈತರ ಮನೆಗಳಿಗೆ ತೆರಳಿ ಅವರನ್ನು ಬಂಧಿಸಿ ಕುದೇರು ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ನಂತರ ಬಿಡುಗಡೆ ಮಾಡಿದರು. ರೈತ ಮುಖಂಡರಾದ ಹೊನ್ನೂರು ಬಸವಣ್ಣ, ಮೇಲಾಜಿಪುರ ಕುಮಾರ, ವಿಜಯಕುಮಾರ ಹೆಗ್ಗೋಠಾರ, ಶಿವಮೂರ್ತಿ ಪಾಳ್ಯ, ಹೆಗ್ಗವಾಡಿಪುರ ಮಹದೇವಸ್ವಾಮಿ, ಚೇತನ್‌ಕೊಳ್ಳೇಗಾಲ, ಕಪ್ಪಡಿ ಶೆಟ್ರು, ಸುರೇಶ್ ಪಾಳ್ಯ ಇದ್ದರು.